RNI NO. KARKAN/2006/27779|Wednesday, January 28, 2026
You are here: Home » breaking news » ಗೋಕಾಕ:ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ

ಗೋಕಾಕ:ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ 

ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ

ಗೋಕಾಕ ಸೆ 18 : ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಇವರ ಆದೇಶದ ಮೇರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ದಿ. 19 ರಂದು ಮುಂಜಾನೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ತಹಶೀಲದಾರ ಜಿ.ಎಸ್.ಮಳಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಪಿಂಚಣಿ ಅದಾಲತ್‍ನ್ನು ಗೋಕಾಕ ನಗರದ ಮಿನಿ ವಿಧಾನ ಸೌಧದ ತಹಶೀಲದಾರ ಕಾರ್ಯಾಲಯದಲ್ಲಿ, ಕೌಜಲಗಿಯ ನಾಡ ಕಛೇರಿಯಲ್ಲಿ ಹಾಗೂ ಮೂಡಲಗಿ ತಹಶೀಲದಾರ ಕಾರ್ಯಲಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವೀನಿ, ಮೈತ್ರಿ, ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳು ಅರ್ಹ ದಾಖಲಾತಿಗಳೊಂದಿಗೆ ಸರಿಯಾದ ಸಮಯಕ್ಕೆ ಪಿಂಚಣಿ ಅದಾಲತ್‍ನಲ್ಲಿ ಪಾಲ್ಗೊಳ್ಳಬೇಕೆಂದು ತಹಶೀಲದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: