RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಜೂಜಾಟದಲ್ಲಿ ತೊಡಗಿದ್ದ 8 ಜನರ ಬಂಧನ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕ:ಜೂಜಾಟದಲ್ಲಿ ತೊಡಗಿದ್ದ 8 ಜನರ ಬಂಧನ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು 

ಜೂಜಾಟದಲ್ಲಿ ತೊಡಗಿದ್ದ 8 ಜನರ ಬಂಧನ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕ ಅ 31: ತಾಲೂಕಿನ ಅಜ್ಜನಕಟ್ಟಿ ಗ್ರಾಮದ ದ್ಯಾಮನ್ನವರ ಎಂಬುವರ ಜಮೀನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಕಳೆದ ದಿ.28 ರಂದು ಸಾಯಂಕಾಲ 4.30ಕ್ಕೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಗೋಕಾಕ ಗ್ರಾಮೀಣ ಠಾಣೆಯ ಪೋಲಿಸರು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಾದ ರಫೀಕ ಅಬ್ದುಲಸಾಬ ಬೋಕರೆ, ಸುರೇಶ ಆನಂದ ತಳವಾರ, ಅಶೋಕ ಮಹಾದೇವ ಗುಮಟನಮರಡಿ, ರಾಜು ರುದ್ರಪ್ಪಾ ಹಸಬಿ, ಬಸವರಾಜ ನಾಗಪ್ಪ ಹಾರುಗೊಪ್ಪ, ಸಾಗರ ಪ್ರಕಾಶ ಕೊಡ್ಲ್ಯಾಳ, ಲಕ್ಷ್ಮಣ ಭೀಮಪ್ಪ ಪೂಜೇರಿ, ಭೀಮಪ್ಪ ಲಕ್ಕಪ್ಪ ಬಂಡೆ ಎಂದು ತಿಳಿದುಬಂದಿದ್ದು. ಬಂಧಿತ ಆರೋಪಿಗಳಿಂದ 11840ರೂ ನಗದು ಹಾಗೂ ಇಸ್ಪೀಟ್ ಏಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಗ್ರಾಮೀಣ ಠಾಣೆಯ ಪಿಎಸ್‍ಐ ಪ್ರದೀಪ ತಳಕೇರಿ ಹಾಗೂ ಸಿಬ್ಬಂಧಿಗಳಾದ ಆರ್ ಸಿ ಹಾದಿಮನಿ, ಜಿ ಎಸ್ ಪಾಟೋಳಿ, ಎಮ್ ವೈ ಕೆಂಪನ್ನವರ, ಆಯ್ ಎಲ್ ವೆಂಕಟಾಪೂರ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: