RNI NO. KARKAN/2006/27779|Tuesday, May 21, 2024
You are here: Home » breaking news » ಖಾನಾಪುರ:ಲಿಂಗನಮಠದಲ್ಲಿ “ಬೆಳವಡಿ ಮಲ್ಲಮ್ಮ” ಜ್ಯೋತಿಗೆ ಅದ್ದೂರಿ ಸ್ವಾಗತ

ಖಾನಾಪುರ:ಲಿಂಗನಮಠದಲ್ಲಿ “ಬೆಳವಡಿ ಮಲ್ಲಮ್ಮ” ಜ್ಯೋತಿಗೆ ಅದ್ದೂರಿ ಸ್ವಾಗತ 

ಲಿಂಗನಮಠದಲ್ಲಿ “ಬೆಳವಡಿ ಮಲ್ಲಮ್ಮ” ಜ್ಯೋತಿಗೆ ಅದ್ದೂರಿ ಸ್ವಾಗತ

ಖಾನಾಪುರ ಫೆ 26 : ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಮಹಿಳಾ ಸೈನ್ಯವನ್ನು ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ ಇಂತಹ ಮಹನೀಯರನ್ನು ನಾವೆಲ್ಲರೂ ಸೇರಿಕೊಂಡು ಜಯಂತಿಯನ್ನು ಉತ್ಸವದ ರೂಫದಲ್ಲಿ ಆಚರಿಸಬೇಕೆಂದು ಖಾನಾಪುರ ತಹಶೀಲ್ದಾರ ಶಿವಾನಂದ ಉಳ್ಳೆಗಡ್ಡಿ ಹೇಳಿದರು.
ತಾಲೂಕಿನ ಗ್ರಾಮವಾದ ಲಿಂಗನಮಠ ಗ್ರಾಮದ ಹತ್ತಿರವಿರುವ ಲಿಂಗನಮಠ-ಗೋವಾ ಕ್ರಾಸನಲ್ಲಿ ಸೋಮವಾರದಂದು “ವೀರರಾಣಿ ಬೆಳವಡಿ ಮಲ್ಲಮ್ಮ” ಜ್ಯೋತಿಯನ್ನು ಪೂಜೆ ಮಾಡುವುದರ ಮೂಲಕ ಬರಮಾಡಿಕೊಂಡು ಮಾತನಾಡಿದರು.
ತಾಲೂಕಿನ ಹೆಮ್ಮೆಯ ಸುಪುತ್ರ ಕೊಡುಗೈದಾನಿ ನಾಸೀರಣ್ಣಾ ಬಾಗವಾನ ಅವರು ಮಾತನಾಡಿ ದಿಟ್ಟ ಹೆಣ್ಣು ಮಗಳು ಕೆಳದಿಯ ಚನ್ನಮ್ಮಾಜಿ ಕಿತ್ತೂರು ಕೇಸರಿಣಿ ರಾಣಿ ಚನ್ನಮ್ಮಾಜಿ ಹೀಗೆ ದೇಶದ ರಕ್ಷಣೆಗಾಗಿ ತಮ್ಮ ಆತ್ಮರ್ಷಣೆಗೆ ಸಿದ್ಧವಾದ ಕನ್ನಡದ ವೀರ ವಿನತೆಯರಲ್ಲಿ ಅಗ್ರಗಣ್ಯ ಪಂಕ್ತಿಯಲ್ಲಿರುವವಳೆಂದರೆ ಬೆಳವಡಿ ಮಲ್ಲಮ್ಮ ಎಂದರು.
ಈ ಸಂಧರ್ಭದಲ್ಲಿ ತಹಶಿಲ್ದಾರರ ಶಿವಾನಂದ ಉಳ್ಳೆಗಡ್ಡಿ, ಕವಿನಿಸೇ ಯುವಘಟಕದ ರಾಜ್ಯಾಧಕ್ಷರಾದ ಕಾಶೀಮ ಹಟ್ಟಿಹೋಳಿ, ಕರವೇ ಕಾರ್ಯಕರ್ತರಾದ ಮಹಾಂತೇಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಸಂಜೀವ ಪಾರಿಶ್ವಾಡ, ರೈತ ಸಂಘದ ಬಾಬು ಬಿಜಾಪುರ, ರಾಜು ರಪಾಟಿ, ಬಸನಗೌಡ ಪಾಟೀಲ, ಮಾರುತಿ ಹರಿಜನ, ರಾಘವೇಂದ್ರ ಸಂಗೋಳ್ಳಿ, ಕೆ.ಬಿ. ಹಿರೇಮಠ ಹಿರಿಯರಾದ ಬಾಳಪ್ಪಜ್ಜ ಮಾಟೋಳ್ಳಿ, ಚಂದ್ರಗೌಡ ಪಾಟೀಲ, ಬಸವರಾಜ ಮಿರಾಶಿ, ಶ್ರೀಶೈಲ ಮಾಟೋಳ್ಳಿ, ಭಜನಾ ಸಂಘದ ಬಸವರಾಜ ಮುಗಳಿಹಾಳ, ಜಗದೀಶ ಮಾಟೋಳ್ಳಿ, ಆನಂದ ಮಿಟಗಾರ ಗ್ರಾಮಸ್ಥರು ಮತ್ತು ಪ್ರಾಥಮಿಕ ಶಾಲೆಯ ಮುದ್ದುಮಕ್ಕಳು ಹಾಜರಿದ್ದರು.

Related posts: