ಗೋಕಾಕ:ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ ವಿವರ
ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ ವಿವರ
ಗೋಕಾಕ ಡಿ 29 : ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಡಿ. 30, 31 ಮತ್ತು ಜನೇವರಿ 1 ರಿಂದ 8 ವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ,
ದಿ. 30 ರಂದು ಮುಂಜಾನೆ 11.30 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಭೇಟಿ, ಸಂಜೆ 5.30 ಗಂಟೆಗೆ ಗೋಕಾಕ ಆಗಮಿಸಿ ವಾಸ್ತವ್ಯ, ದಿ.31 ರಂದು 11.30 ಗಂಟೆಗೆ ಅಥಣಿಯ ಮೋಟಗಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವರು, 3.30 ಗಂಟೆಗೆ ಗೋಕಾಕ ಆಗಮನ ಮತ್ತು ವಾಸ್ತವ್ಯ, ದಿ. 1 ರಂದು ಮುಂಜಾನೆ 10 ಗಂಟೆಯಿಂದ ಗೋಕಾಕದಲ್ಲಿ ಸಾರ್ವಜನಿಕರ ಭೇಟಿ ಮತ್ತು ವಾಸ್ತವ್ಯ. ದಿ. 2 ರಂದು ಮುಂಜಾನೆ 9.20 ಗಂಟೆಗೆ ಬೆಳಗಾವಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ, ದಿ. 3 ರಂದು ಮಧ್ಯಾಹ್ನ 12 ಗಂಟೆಗೆ ಬಳ್ಳಾರಿಯ ಪ್ರವಾಸ ಮಂದಿರದಲ್ಲಿ ಸಾರ್ವಜನಿಕರ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ಭೇಟಿ, ರಾತ್ರಿ ಗೋಕಾಕ ಆಗಮಿಸಿ ವಾಸ್ತವ್ಯ, ದಿ. 4 ರಂದು ಮುಂಜಾನೆ 10.30 ಗಂಟೆಗೆ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 100 ಕೋಟಿ ರೂಗಳ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿಗಳ ಶಂಕು ಸ್ಥಾಪನೆ ನೇರವೇರಿಸಿ ಸಂಜೆ 6.30 ಗಂಟೆಗೆ ಗೋಕಾಕದಲ್ಲಿ ವಾಸ್ತವ್ಯ. ದಿ. 5 ರಂದು ಗೋಕಾಕ ಮತಕ್ಷೇತ್ರದ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಸ್ತವ್ಯ. ದಿ. 6 ರಂದು ಮುಂಜಾನೆ 11 ಗಂಟೆಗೆ ಹಿಡಕಲ್ ಡ್ಯಾಮನ ಹುನ್ನೂರ ಪ್ರವಾಸಿ ಮಂದಿರದಲ್ಲಿ ನೀರಾವರಿ ನಿಗಮದ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಗೋಕಾಕಕ್ಕೆ ಆಗಮನ ವಾಸ್ತವ್ಯ, ದಿ. 7 ರಂದು ಗೋಕಾಕದಲ್ಲಿ ಸಾರ್ವಜನಿಕರ ಭೇಟಿ ನಂತರ ವಾಸ್ತವ್ಯ. ದಿ. 8 ರಂದು ಮುಂಜಾನೆ 9.20ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಆಪ್ತಕಾರ್ಯದರ್ಶಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.