RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಂಕಷ್ಟದ ಬದುಕಿನಲ್ಲಿ ಕುಮಾರಿ ಸುಜಾತಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

ಗೋಕಾಕ:ಸಂಕಷ್ಟದ ಬದುಕಿನಲ್ಲಿ ಕುಮಾರಿ ಸುಜಾತಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ 

ಸಂಕಷ್ಟದ ಬದುಕಿನಲ್ಲಿ ಕುಮಾರಿ ಸುಜಾತಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

 

 

*ಅಡಿವೇಶ ಮುಧೋಳ.

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಅ 12 :

ಘಟಪ್ರಭಾ ಹತ್ತಿರದ ಮಲ್ಲಾಪುರ(ಪಿ.ಜಿ) ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಸುಜಾತಾ ಶೇಖರ ಹಳ್ಳೂರ ಅವಳು ಮಹಾಮಾರಿ ಕರೊನಾ ಆತಂಕ ಹಾಗೂ ಬಡತನವನ್ನು ಮೆಟ್ಟಿನಿಂತು ಪ್ರಸಕ್ತ 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆದು, 615 (ಶೇ.98.04) ಅಂಕ ಗಳಿಸಿ ಅತ್ಯುತ್ತಮ ಫಲಿತಾಂಶ ಪಡೆದು ಹುಟ್ಟೂರಿಗೆ, ತಾನು ಕಲಿತ ಶಾಲೆಗೆ ಕೀರ್ತಿ ತಂದಿದ್ದಾಳೆ.
ಕುಮಾರಿ ಸುಜಾತಾಳ ತಂದೆ ಶೇಖರ ಹಳ್ಳೂರ ಅವರು ಕೃಷಿ ಕೂಲಿ ಕಾರ್ಮಿಕನಾಗಿ ನಿತ್ಯ ಕೂಲಿ ನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ತನ್ನ ಕುಟುಂಬದ ಸಂಕಷ್ಟದ ಬದುಕಿನಲ್ಲಿ ಕುಮಾರಿ ಸುಜಾತಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಮನುಷ್ಯನಿಗೆ ಬದುಕಿನಲ್ಲಿ ಎಂತಹ ಕಷ್ಟವಿದ್ದರೂ ಸಾಧನೆಗೆ ಯಾವ ಅಡತಡೆ ಇಲ್ಲ! ಅಂಬುವುದಕ್ಕೆ ಸುಜಾತಾ ಹಳ್ಳೂರ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಶಾಲೆಯ ಮುಖ್ಯೋಪಾಧ್ಯಯ ಸೇರಿದಂತೆ ಶಿಕ್ಷಕ ವೃಂದ, ಗ್ರಾಮದ ಶಿಕ್ಷಣ ಪ್ರೇಮಿಗಳು, ಸಮಸ್ತ ಮಾಳಿ ಮತ್ತು ಮಾಲಗಾರ ಸಮಾಜದ ಹಿರಿಯ ನಾಗರಿಕರು, ಶಿಕ್ಷಣ ಪ್ರೇಮಿಗಳು, ಸಾಧನೆಗೈದ ವಿದ್ಯಾರ್ಥಿನಿ ಸುಜಾತಾ ಹಳ್ಳೂರ ಅವಳನ್ನು ಅಭಿನಂದಿಸಿದ್ದಾರೆ.
“ಬೆಲ್ಲದ ಬಾಗೇವಾಡಿಯಲ್ಲಿರುವ ನನ್ನ ಚಿಕ್ಕಮ್ಮಳ ಮನೆಯ ಆಸರೆಯಲ್ಲಿ ಶಿಕ್ಷಣ ಕಲಿಯುತ್ತಿದ್ದೇನೆ. ನನ್ನ ತಂದೆ ನನ್ನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ನಮ್ಮದು ಕಡು ಬಡತನದ ಕುಟುಂಬವಾಗಿದೆ. ಮುಂದೆ ನಾನು ಐಎಎಸ್ ಮಾಡುವ ಕನಸು ಇದೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿಯ ಸಾಧನೆ ಖುಷಿ ತಂದಿದೆ. * ಸುಜಾತಾ ಹಳ್ಳೂರ. ಸಾಧನೆಗೈದ ವಿದ್ಯಾರ್ಥಿ.

Related posts: