ಗೋಕಾಕ:ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಗೋಕಾಕ ಅ 30: ಅಖಿಲ ಕರ್ನಾಟಕ ಹೆಳವರ ಸಮಾಜದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಜರುಗಿತು.
ಅಖಿಲ ಕರ್ನಾಟಕ ಹೆಳವರ ಸಮಾಜದ ರಾಜ್ಯ ಉಪಾಧ್ಯಕ್ಷ ಅಮೃತ ದಪ್ಪಿನವರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೋಕಾಕ ತಾಲೂಕಾಧ್ಯಕ್ಷ ರಮೇಶ ಗೋಪಾವರ, ಉಪಾಧ್ಯಕ್ಷರನ್ನಾಗಿ ಕಲ್ಲಪ್ಪ ಹೆಳವರ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ, ರಾಜ್ಯ ಉಪಾಧ್ಯಕ್ಷ ಅಮೃತ ದಪ್ಪಿನವರ ಅವರು, ಹೆಳವರ ಸಮಾಜ ಅರ್ಥಿಕ, ಶೈಕ್ಷಣಿಕವಾಗಿ ಅತ್ಯಂತವಾಗಿ ಹಿಂದುಳಿದಿದ್ದು ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ನಾವಿಂದು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕಾದರೇ ಸಂಘಟನೆ ಅವಶ್ಯಕವಾಗಿ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದ್ದಪ್ಪ ಹೆಳವರ, ಗಣಪತಿ ಹೆಳವರ, ದತ್ತು ಹೆಳವರ, ಅರ್ಜುನ ಹೆಳವರ, ಅಪ್ಪಾಸಾಬ ಗೋಕಾಕ, ಪ್ರಕಾಶ ಹೆಳವರ, ಮಾಯಪ್ಪ ಹೆಳವರ, ಬಸವರಾಜ ದಪ್ಪಿನವರ, ಕರೆಪ್ಪ ಹೆಳವರ, ಶಂಕರ ಹೆಳವರ, ಶಿವಲಿಂಗ ಹೆಳವರ, ಮಾರುತಿ ಹೆಳವರ, ಸದಾಶಿವ ಹೆಳವರ, ಗದ್ದೆಪ್ಪ ಹೆಳವರ, ಸೇರಿದಂತೆ ಅನೇಕರು ಇದ್ದರು.