ಘಟಪ್ರಭಾ: ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ
ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮಾ 31 :
ಸಮೀಪದ ಅರಬಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕೆಂಚಪ್ಪ ರಾಮಪ್ಪ ಮಂಟೂರ ಇವರು (ಟಿಎಪಿಎಮ್‍ಎಸ್) ಗೋಕಾಕ ತಾಲೂಕಾ ಒಕ್ಕುಲುತನ ಹುಟ್ಟವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಹಾಗೂ ಲಗಮಪ್ಪ ಯಲ್ಲಪ್ಪ ಪೂಜೇರಿಯವರು (ಇಪ್ಕೋ) ಇಂಡಿಯನ್ ಪಾರ್ಮರ್ಸ್ ಪರ್ಟಿಲಾಯಜರ್ ಕೋ-ಆಪ ನ್ಯೂ ದಿಲ್ಲಿ ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಅವಿರೋಧ ಅಯ್ಕೆಯಾಗಿದ್ದಕ್ಕೆ ಸಂಘದ ಎಲ್ಲ ಆಡಳಿತ ಮಂಡಳಿಯ ಪರವಾಗಿ ಆತ್ಮೀಯವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾದ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಜಡಕೀನ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.