RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ

ಗೋಕಾಕ:ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ 

ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳ ಏರ್ಪಾಡು : ರಾಹುಲ್ ಘೋಷಣೆ

ಗೋಕಾಕ ಫೆ 14: ವಿದ್ಯಾರ್ಥಿಗಳಲ್ಲಿಯ ಕ್ರೀಡಾ ಆಸಕ್ತಿ ಮತ್ತು ಅವರ ಬೇಡಿಕೆಯನ್ನು ಗಮನಿಸಿ ಪ್ರಸ್ತುತ ವರ್ಷದಿಂದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಒಲಂಪಿಕ್ ಮಾದರಿಯಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕ್ರೀಡಾ ಸ್ವರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಹೇಳಿದರು.

ಶನಿವಾರದಂದು ನಗರದ ಹಿಲ್ ಗಾರ್ಡನ್ ನಲ್ಲಿ 22ನೇ ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮದ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಔಣತಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೋಕಾಕ,ಯಮಕನಮರಡಿ ಹಾಗೂ ಚಿಕ್ಕೋಡಿಯಲ್ಲಿ ನಡೆಯುವ ಸತೀಶ ಪ್ರತಿಭಾ ಪುರಸ್ಕಾರ ಮತ್ತು ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 12 ಸಾವಿರ ಸ್ವರ್ಧಾಳುಗಳು ಭಾಗವಹಿಸುತ್ತಿದ್ದಾರೆ, ಅದರಲ್ಲಿ ಅಂತಿಮ ಹಂತದ ಸ್ವರ್ಧೆಯಲ್ಲಿ 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ಲಕ್ಷಾಂತರ ಮೊತ್ತದ ಬಹುಮಾನ ಗೆಲ್ಲುತಾ ಬಂದಿದ್ದಾರೆ.

ಸತೀಶ ಶುಗರ್ಸ ಅವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೋಳುವ ಮುಖೇನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೋಕಾಕ ಹಾಗೂ ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿಯ ಆಸಕ್ತಿ ಗಮನಿಸಿ ಪ್ರಸ್ತುತ ವರ್ಷದಿಂದ ಸತೀಶ ಶುಗರ್ಸ ಅವಾರ್ಡ್ಸ ಮತ್ತು ಸತೀಶ ಪ್ರತಿಭಾ ಪುರಸ್ಕಾರದ ಬಹುಮಾನದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ.ಅಂತಿಮ ಹಂತದಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡವರು ಸಹ ವಿಜೇತ ವಿದ್ಯಾರ್ಥಿಗಳ ಸರಿಸಮಾನವಾಗಿ ಸ್ವರ್ಧೆ ನೀಡುತ್ತಿರುವುದನ್ನು ಗಮನಿಸಿ ಪ್ರಸ್ತುತ ವರ್ಷದಿಂದಲೇ ಸಮಾಧಾನಕರ ಬಹುಮಾನದ ಮೊತ್ತವನ್ನು ಸಹ ನಾವು ಹೆಚ್ಚಿಸಲು ತಿರ್ಮಾನಿಸಲಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಈಗಿನಿಂದಲೇ ಇದರ ತಯಾರಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ಅಂತಿಮ ಹಂತದ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ , ಡಿ.ಡಿ.ಪಿ.ಐ ಸೀತಾರಾಮು, ಬಿಇಒಗಳಾದ ಪ್ರಕಾಶ್ ಹಿರೇಮಠ, ಶ್ರೀಮತಿ ಪ್ರಭಾವತಿ ಪಾಟೀಲ್, ಬಸವರಾಜಪ್ಪ, ಪಾಂಡುರಂಗ ಮಧಬಾವಿ, ಎ‌.ಎ.ಖಾಜಿ, ಎಂ.ಆರ್.ಮುಂಜಿ, ಶ್ರೀಮತಿ ಮಹಾದೇವಿ ನಾಯಿಕ ಸಮಾಜ ಕಲ್ಯಾಣ ಅಧಿಕಾರಿ ಎ.ಬಿ.ಮಲಬನ್ನವರ, ಸಂಘಟಕ ರಿಯಾಜ ಚೌಗಲಾ, ಎಲ್.ಕೆ.ತೋರಣಗಟ್ಟಿ, ಎಸ್.ವ್ಹಿ.ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: