RNI NO. KARKAN/2006/27779|Thursday, February 12, 2026
You are here: Home » breaking news » ಗೋಕಾಕ:ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ

ಗೋಕಾಕ:ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ 

ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದಲ್ಲಿ ಗಂಗಾ ಆರತಿ : ಅಶೋಕ ಪೂಜಾರಿ
ಗೋಕಾಕ ಫೆ 12 : ಮಾಹಶಿವರಾತ್ರಿ ಅಂಗವಾಗಿ ಫೆ15 ರಂದು ನಗರದ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಯ ಸಂಗಮ ಕ್ಷೇತ್ರದಲ್ಲಿ ಗಂಗಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು.

ಗುರುವಾರದಂದು ಇಲ್ಲಿನ ಘಟಪ್ರಭಾ ಮತ್ತು ಮಾರ್ಕೆಂಡೆಯ ನದಿ ಸಂಗಮ ಅಭಿವೃದ್ಧಿ ಸಮಿತಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರವಿವಾರದಂದು ಸಾಯಂಕಾಲ 5 ಘಂಟೆಗೆ ಗಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮನೋಭಾವನೆ ಉಳ್ಳ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಗೋಕಾಕ ನಗರದಲ್ಲಿ ಹರಿಯುವ ಮಾರ್ಕೆಂಡೆಯ ಮತ್ತು ಘಟಪ್ರಭಾ ನದಿಗಳ ಸಂಗಮ ಸ್ಥಳ ತನದೆ ಆದ ಇತಿಹಾಸ ಹೊಂದಿದೆ. ನದಿಗಳ ಸಂಗಮ ಕ್ಷೇತ್ರವನ್ನು ನಾವೆಲ್ಲರೂ ಪುಣ್ಯ ಕ್ಷೇತ್ರವೆಂದು ನಂಬುತ್ತೆವೆ. ಈ ಪುಣ್ಯ ಕ್ಷೇತ್ರವನ್ನು ಪ್ರಸಕ್ತ ವರ್ಷದಿಂದಲೇ ಅಭಿವೃದ್ಧಿ ಪಡೆಸುವ ಭರವಸೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೀಡಿದ್ದಾರೆ. ಈ ಪುಣ್ಯ ಕ್ಷೇತ್ರ ಅಭಿವೃದ್ಧಿ ಹೊಂದಿದರೆ ಗೋಕಾಕ ನಗರ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾರ್ಪಾಡು ಹೊಂದುತ್ತದೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರೂ ಸಹ ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಆದಷ್ಟು ಬೇಗ ಈ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಅಶೋಕ್ ಪೂಜಾರಿ ಹೇಳಿದರು.

ಕೆ.ಎಲ್ ಇ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ ಘಟಪ್ರಭಾ ಮತ್ತು ಮಾರ್ಕೆಂಡೆಯ ನದಿ ಸಂಗಮ ಅಭಿವೃದ್ಧಿ ಸಮಿತಿ ವತಿಯಿಂದ ಬರುವ ಫೆ 15 ರಂದು ಶಿವರಾತ್ರಿ ನಿಮಿತ್ತ ಗಂಗಾ ಆರತಿಯನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ರಮೇಶ ಜಾರಕಿಹೊಳಿ ಅವರು ಭಾಗವಳಿಸುವರು. ಗೋಕಾಕ ನಗರದ ಎಲ್ಲಾ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದ ಅವರು ಸಚಿವ ಸತೀಶ ಜಾರಕಿಹೊಳಿ ಅವರು ಲೋಕೋಪಯೋಗಿ ಇಲಾಖೆಯಿಂದ ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡೆಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ವಿಜಯ ಶಾಸ್ತ್ರಿ,ಸೋಮಶೇಖರ್ ಮಗದುಮ್ಮ, ಬಸವರಾಜ ದೇಶನೂರ, ರಾಜು ವರದಾಯಿ, ರಮೇಶ ಮೂರತಲಿ ಉಪಸ್ಥಿತರಿದ್ದರು.

Related posts: