RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಭೀಮಪ್ಪ ಕಡಾಡಿ ಆಯ್ಕೆ

ಗೋಕಾಕ:ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಭೀಮಪ್ಪ ಕಡಾಡಿ ಆಯ್ಕೆ 

ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಭೀಮಪ್ಪ ಕಡಾಡಿ ಆಯ್ಕೆ

ಬೆಟಗೇರಿ ಅ 3 : ಸಮೀಪದ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ಅ.3 ರಂದು ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಭೀಮಪ್ಪ ಸತ್ತೆಪ್ಪ ಕಡಾಡಿ ಅವರು ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ.
3ನೇ ಸಲ ಅಧ್ಯಕ್ಷರಾಗಿ ಆಯ್ಕೆ : ಕಲ್ಲೋಳಿ ಪಟ್ಟಣದ ಹಿರಿಯ ಸಹಕಾರಿ ಜೀವಿ ಭೀಮಪ್ಪ ಕಡಾಡಿ ಈಗಾಗಲೇ ಸುಮಾರು 25 ವರ್ಷಗಳ ಕಾಲ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು ಈ ಹಿಂದೆ ಎರಡು ಅವಧಿಗೆ, ಎರಡು ಸಲ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಈಗ ಮತ್ತೇ ಮೂರನೇಯ ಭಾರಿ ಸಂಘದ ಅಧ್ಯಕ್ಷರಾಗಿ ಪ್ರಸಕ್ತ ಅವಧಿಗೆ ಅವಿರೂಧವಾಗಿ ಆಯ್ಕೆಗೊಂಡಿದ್ದು ದಾಖಲಾರ್ಹ ಸಂಗತಿಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಭೀಮಪ್ಪ ಕಡಾಡಿ ಅವರು ಸಲ್ಲಿಸುತ್ತಿರುವ ಸೇವೆ ಅವಿಸ್ಮರಣಿಯವಾಗಿದೆ.
ಗೋಕಾಕ ಸಿಡಿಒ ಕಛೇರಿಯ ನಿರೀಕ್ಷಕ ಎಸ್.ಬಿ.ಬಿರಾದಾರಪಾಟೀಲ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಕಾರಿ ಧುರೀಣರಾದ ಬಾಳಪ್ಪ ಬೆಳಕೂಡ, ಬಸಗೌಡ ಪಾಟೀಲ, ಬಿ.ಎಸ್.ಗೊರೋಶಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಬಾಗೇವಾಡಿ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಸಹಕಾರಿ ವಲಯದ ಧುರೀಣರು, ಗಣ್ಯರು, ಮತ್ತೀತರರು ಇದ್ದರು.

Related posts: