ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ

ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 16 :
ಹೆರಿಗೆ ನೋವು ತಾಳಲಾರದೆ (108 ) ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಶನಿವಾರದಂದು ಸಾಯಂಕಾಲ ಸಂಭವಿಸಿದೆ
ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ಶ್ರೀಮತಿ ಸಮಿತ್ರಾ ಕೆಳಗಡೆ ಎಂಬ ಮಹಿಳೆಯನ್ನು ಹೆರಿಗೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯ ತೀವ್ರ ಹೆರಿಗೆ ನೋವು ಸಂಭವಿಸಿದ ಪರಿಣಾಮ ಅಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ಘಟನೆ ಜರುಗಿದೆ
ಮಗು ಮತ್ತು ತಾಯಿ ಆರೋಗ್ಯವಾಗಿದ್ದು ನಗರದ ಸಾರ್ವಜನಿಕ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಕೊಂಡ ಸಿಬ್ಬಂದಿ ಮಾದೇಶ ಲೋಕಾಪುರ ತಿಳಿಸಿದ್ದಾರೆ