RNI NO. KARKAN/2006/27779|Saturday, May 10, 2025
You are here: Home » breaking news » ಗೋಕಾಕ:ನಾಳೆ “ಮಾತೃ ಹೃದಯಿ” ಅಭಿನಂದನ ಗ್ರಂಥ ಲೋಕಾರ್ಪಣೆ

ಗೋಕಾಕ:ನಾಳೆ “ಮಾತೃ ಹೃದಯಿ” ಅಭಿನಂದನ ಗ್ರಂಥ ಲೋಕಾರ್ಪಣೆ 

ನಾಳೆ “ಮಾತೃ ಹೃದಯಿ” ಅಭಿನಂದನ ಗ್ರಂಥ ಲೋಕಾರ್ಪಣೆ

ಗೋಕಾಕ ಜ 31 : ಫೆಬ್ರುವರಿ 1 ರಂದು ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿ ಜರುಗುವ ಶರಣ ಸಂಸ್ಕøತಿ ಉತ್ಸವದ ಮೊದಲನೇಯ ದಿನ ಪತ್ರಕರ್ತ ಸಾದಿಕ್ ಎಮ್. ಹಲ್ಯಾಳ ಸಂಪಾದಕತ್ವದಲ್ಲಿ ಮೂಡಿ ಬಂದಿರುವ “ಮಾತೃ ಹೃದಯಿ” ಪೂಜ್ಯ ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳ ಅಭಿನಂದನ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದು ಮಾತೃ ಹೃದಯಿ ಅಭಿನಂದನ ಗ್ರಂಥ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ 15 ವರ್ಷಗಳಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜವನ್ನು ಸಧೃಡಗೊಳಿಸುವಲ್ಲಿ ಶ್ರಮಿಸುತ್ತಿರುವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಈ ಭಾಗದ ಒಂದು ದೊಡ್ಡ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಈ ಎಲ್ಲ ಸತ್ಕಾರ್ಯಗಳನ್ನೊಳಗೊಂಡ ಸ್ಥಳೀಯ ಯುವ ಪತ್ರಕರ್ತ ಸಾದಿಕ್ ಹಲ್ಯಾಳ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಮಾತೃಹೃದಯಿ ಅಭಿನಂದನ ಗ್ರಂಥ ಕಾರ್ಯ ಶ್ಲಾಘನೀಯವಾಗಿದೆ. ಶ್ರೀಗಳು ಪಟ್ಟಾಧಿಕಾರಿ ವಹಿಸಿಕೊಂಡ 15ನೇ ವರ್ಷದ ಸವಿನೆನಪಿನ ನಿಮಿತ್ಯ ಸಮಸ್ತ ಗೋಕಾಕ ನಾಡಿನ ಜನತೆಯ ಪರವಾಗಿ ಶುಕ್ರವಾರದಂದು ಜರುಗುವ ಶರಣ ಸಂಸ್ಕøತಿ ಉತ್ಸವದಲ್ಲಿ ಶ್ರೀಗಳಿಗೆ ಗ್ರಂಥವನ್ನು ಸಮರ್ಪಿಸಲಾಗುವುದು. ಕಾರಣ ಮಠದ ಸಕಲ ಭಕ್ತಾದಿಗಳು, ಅಭಿಮಾನಿಗಳು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ಈ ಪ್ರಕಟಣೆಯ ಮೂಲಕ ಗ್ರಂಥ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಖಾನಪ್ಪನವರ ಕೋರಿದ್ದಾರೆ.

Related posts: