RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ

ಗೋಕಾಕ:ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ 

ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ

ಗೋಕಾಕ ಅ 15: ರಾಜ್ಯದ ಸಿಎಂ ಸಿದ್ಧರಾಮಯ್ಯ ನೇತ್ರತ್ವದ ಸರಕಾರ ದಿನ ದಲಿತರ, ಬಡವರಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಸೌರಭಾಗ್ಯ, ರಾಜೀವ ಆರೋಗ್ಯಭಾಗ್ಯ, ಮನಸ್ವಿನಿ, ಕ್ಷೀರಧಾರೆ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿ ತಂದಿದ್ದು ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಾರ್ವಜನಿಕರ ಮನೆ, ಮನೆಗೆ ಈ ಯೋಜನೆಗಳ ಬಗ್ಗೆ ತಿಳಿಸುವ ಕಾರ್ಯದಲ್ಲಿ ತೊಡಗಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ಗೋಕಾಕ ಮತಕ್ಷೇತ್ರದ ಚುನಾವಣಾ ವೀಕ್ಷಕ ಶಿವಾನಂದ ಪಾಚಂಗಿ ಹೇಳಿದರು.

ಅವರು, ನಗರದ ವಾರ್ಡ ನಂ-21, 22 ರಲ್ಲಿ ಮನ ಮನೆಗೆ ಕಾಂಗ್ರೇಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೇಸ್ ಪಕ್ಷನುಡಿದಂತೆ ನಡೆದು ಸಾಧನೆ ಹಾದಿಯಲ್ಲಿದ್ದು ಕಾರ್ಯಕರ್ತರು ಮುಂಬರುವ 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಪಕ್ಷ ಸರ್ಕಾರ ರಚಿಸುವಲ್ಲಿ ಶ್ರಮಿಸಬೇಕು ಎಂದರು.

ನಗರಸಭೆ ಸದಸ್ಯ ಭೀಮಶಿ ಭರಮಣ್ಣವರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ ಸರಕಾರ ಚುನಾವಣೆ ಸಮಯದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಎಲ್ಲವನ್ನೂ ಈಡೇರಿಸಿದೆ ಜೊತೆಗೆ ಗೋಕಾಕ ನಗರದ ಅಭಿವೃದ್ಧಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಶ್ರಮಿಸಿದ್ದಾರೆ ಎಂದರು.

ಗೋಕಾಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಜೀರ ಶೇಖ, ನಗರಸಭೆ ಸದಸ್ಯೆ ಯಂಕವ್ವ ಶಾಸ್ತ್ರಿಗೊಲ್ಲರ, ಮುಖಂಡರಾದ ಯೂನುಸ್ ನದಾಫ್, ದುರ್ಗಪ್ಪ ಶಾಸ್ತ್ರಿಗೊಲ್ಲರ, ಅಶ್ಫಾಕ್ ಮುಲ್ಲಾ, ಅಲ್ಲಾಭಕ್ಷ ಮುಲ್ಲಾ, ಡಾ.ಜಮಾದಾರ, ಶಂಕರ ಖಿಲಾರಿ, ಬಸವರಾಜ ಭಜಂತ್ರಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

Related posts: