RNI NO. KARKAN/2006/27779|Wednesday, June 24, 2026
You are here: Home » breaking news » ಗೋಕಾಕ:ಶಿವಕುಮಾರ ಮಹಾಸ್ವಾಮಿಜಿ ಶಿವೈಕ್ಯರಾಗಿದ್ದರಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಅಭಿನವ ಶಿವಾನಂದ ಮಹಾಸ್ವಾಮಿಜಿ

ಗೋಕಾಕ:ಶಿವಕುಮಾರ ಮಹಾಸ್ವಾಮಿಜಿ ಶಿವೈಕ್ಯರಾಗಿದ್ದರಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಅಭಿನವ ಶಿವಾನಂದ ಮಹಾಸ್ವಾಮಿಜಿ 

ಶಿವಕುಮಾರ ಮಹಾಸ್ವಾಮಿಜಿ ಶಿವೈಕ್ಯರಾಗಿದ್ದರಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ : ಅಭಿನವ ಶಿವಾನಂದ ಮಹಾಸ್ವಾಮಿಜಿ

ಬೆಟಗೇರಿ ಜ 22 : ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಜಿ ಶಿವೈಕ್ಯರಾಗಿದ್ದರಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮಿಜಿ ಸಂತಾಪ ಶೋಕ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿಯ ಸಹಯೋಗದಲ್ಲಿ ಮಂಗಳವಾರ ಜ.22 ರಂದು ಇಲ್ಲಿಯ ಅಶ್ವರೂಢ ಬಸವೇಶ್ವರ ವೃತ್ತದಲ್ಲಿ ಡಾ. ಶಿವಕುಮಾರ ಮಹಾಸ್ವಾಮಿಜಿ ಶಿವೈಕ್ಯರಾದ ಹಿನ್ನಲೆಯಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಶೋಕ ಸಭೆಯಲ್ಲಿ ಮಾತನಾಡಿ,ನಡೆದಾಡುವ ಬಸವಣ್ಣನಂತೆ ಇದ್ದ ಸಮಾನತೆ ಮತ್ತು ಶೈಕ್ಷಣಿಕ ಹರಿಕಾರರಾಗಿ, ಮಕ್ಕಳ ಪಾಲಿನ ಆರಾಧ್ಯ ದೇವರಾಗಿ ಅನ್ನ, ಜ್ಷಾಜ, ಆಶ್ರಯ ನೀಡಿ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದ ಶಿವಕುಮಾರ ಶ್ರೀಗಳು ಭಕ್ತರ, ಮಕ್ಕಳ ಪಾಲಿಗೆ ದಿವ್ಯ ಶಕ್ತಿಯಾಗಿದ್ದರು ಎಂದರು.
ಶಿವೈಕ್ಯ ಡಾ. ಶಿವಕುಮಾರ ಶ್ರೀಗಳ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಎಂ.ಐ.ನೀಲಣ್ಣವರ, ಮಲ್ಲೇಶ ಪಣದಿ, ಮಲ್ಲಿಕಾರ್ಜುನ ನೀಲಣ್ಣವರ, ಈರಣ್ಣ ಸಿದ್ನಾಳ, ಶ್ರೀಶೈಲ ಗಾಣಗಿ, ಚಂದ್ರಶೇಖರ ನೀಲಣ್ಣವರ, ಬಸವರಾಜ ಪಣದಿ, ರಮೇಶ ಮುಧೋಳ, ಈಶ್ವರ ಬಳಿಗಾರ, ಈರಪ್ಪ ದೇಯಣ್ಣವರ, ಶ್ರೀಧರ ದೇಯಣ್ಣವರ ಸೇರಿದಂತೆ ಸ್ಥಳೀಯ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಶರಣರು, ಗಣ್ಯರು, ಸಿದ್ಧಗಂಗಾ ಮಠದ ಭಕ್ತರು, ಮಕ್ಕಳು, ಸ್ಥಳೀಯರು ಈ ವೇಳೆ ಉಪಸ್ಥಿರಿದ್ದು, ಕಂಬನಿ ಮಿಡಿದು ಸಂತಾಪ ಶೋಕ ವ್ಯಕ್ತಪಡಿಸಿದರು.

Related posts: