RNI NO. KARKAN/2006/27779|Friday, March 20, 2026
You are here: Home » breaking news » ಬೆಳಗಾವಿ:ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ : ನೂತನ ಅರಣ್ಯ ಸಚಿವ ಸತೀಶ

ಬೆಳಗಾವಿ:ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ : ನೂತನ ಅರಣ್ಯ ಸಚಿವ ಸತೀಶ 

ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ : ನೂತನ ಅರಣ್ಯ ಸಚಿವ ಸತೀಶ

ಬೆಳಗಾವಿ ಡಿ 28 : ಶಾಸಕ ರಮೇಶ ಜಾರಕಿಹೊಳಿ ಈವರೆಗೆ ಕಾಂಗ್ರೆಸ್ ಹೈಕಮಾಂಡ ಸಂರ್ಪಕಕ್ಕೆ ಸಿಕ್ಕಿಲ್ಲ . ನಾವು ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದು, ಮಾತನಾಡಿ ಎಲ್ಲ ಸಮಸ್ಯೆಗಳನ್ನು ಬಗ್ಗೆ ಹರಿಸುತ್ತೆವೆ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಕ್ಷ ನೀಡಿದ ಅರಣ್ಯ ಖಾತೆ ಸಂತೋಷ ನೀಡಿದೆ. ಸಾರ್ವಜನಿಕರ ಜೊತೆ ಬೆರೆಯುವ ಖಾತೆ ಇದಾಗಿದ್ದು, ಉತ್ತಮ ರೀತಿಯಲ್ಲಿ ಕೆಲಸ ಮಾಡುವೆ ಎಂದರು.

ಖಾತೆ ಬಗ್ಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷ ನೀಡಿದ ಜವಾಬ್ದಾರಿ ಚೆನ್ನಾಗಿ ನೆರವೇರಿಸುವೆ ಎಂದರು.

ಸಹೋದರ ರಮೇಶ್​ಗೆ ಸ್ವಲ್ಪ ಕೋಪ ಜಾಸ್ತಿ ಅವರ ಜೊತೆ ಮಾತಾಡಿ ಸಮಸ್ಯೆ ಬಗೆ ಹರಿಸುತ್ತೇವೆ. ಪಕ್ಷದ ಹಿತದೃಷ್ಟಿಯಿಂದ ತಾವಿಬ್ಬರೂ ಒಟ್ಟಾಗುವುದು ಅನಿವಾರ್ಯ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

Related posts: