ಗೋಕಾಕ:ಖೋ ಖೋ ಹಾಗೂ ಜೂಡೊ ಸ್ವರ್ಧೆಯಲ್ಲಿ ಉತ್ತಮ ಸಾಧನೆ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ
ಖೋ ಖೋ ಹಾಗೂ ಜೂಡೊ ಸ್ವರ್ಧೆಯಲ್ಲಿ ಉತ್ತಮ ಸಾಧನೆ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ
ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಏ 8 :
ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಮಂಜುನಾಥ್ ಹೊನಕೂಪ್ಪಿ , ಮಾಲಪ್ಪ ಕೆಂಪಣ್ಣಗೋಳ, ಸುನೀಲ್ ಹಳ್ಳೂರ, ಕಾವೇರಿ ಬಾಗೋಜಿ, ಖೋ ಖೋ ಹಾಗೂ ಗಂಗಾಧರ ಲಕ್ಕಣ್ಣವರ ಜೂಡೊ ಸ್ವರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಯೂನಿವರ್ಸಿಟಿ ಬ್ಲೂ ಎಂದು ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ , ಪ್ರಾಚಾರ್ಯ ಐ.ಎಸ್.ಪವಾರ, ದೈಹಿಕ ಶಿಕ್ಷಣ ಮಾರ್ಗದರ್ಶಕ ಎಸ್.ಬಿ.ತೇಲಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.