RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸದಾ ಸಿದ್ಧ-ಬಳಿಗಾರ

ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸದಾ ಸಿದ್ಧ-ಬಳಿಗಾರ 

ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸದಾ ಸಿದ್ಧ-ಬಳಿಗಾರ

ಗೋಕಾಕ ನ 5 : ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಸದಾ ಸಿದ್ದನಿದ್ದೇನೆ. ಕೆಲ ಜನರು ಅಭಿವೃದ್ದಿ ಕಾರ್ಯದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಗ್ರಾಮಸ್ಥರು ಅಂತಹ ವ್ಯಕ್ತಿಗಳ ಮಾತಿಗೆ ಕಿವಿಗೊಡಬಾರದು ಎಂದ ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು.
ಅವರು ಇತ್ತೀಚಿಗೆ ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜರುಗಿದ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದ್ದು ಇನ್ನೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಸಭೆಯ ನೊಡೆಲ್ ಅಧಿಕಾರಿಗಳಾಗಿ ಜನ್ಮಟ್ಟಿ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಪವಾಡಿ ಹೊಸಟ್ಟಿ,ಅಶೋಕ ಬಂಡಿವಡ್ಡರ, ತಮ್ಮಣ್ಣ ಬುಳ್ಳಿ, ಬಸವರಾಜ ಹುಳ್ಳಿ, ಪಿಡಿಓ ಯಲ್ಲಪ್ಪ ಹೊಸಮನಿ, ಕಾರ್ಯದರ್ಶಿ ಈರಪ್ಪ ಕುಂದರಗಿ, ಪರಮೇಶ್ವರ ಕಡಕೋಳ,ಬಿ.ಪಿ.ಬುಳ್ಳಿ ಸೇರಿದಂತೆ ಗ್ರಾಮಸ್ಥರು ಇದ್ದರು.

Related posts: