ಮೂಡಲಗಿ:ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ
ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ
ಮೂಡಲಗಿ ಸೆ 18 : ಕರ್ನಾಟಕ ನವನಿರ್ಮಾಣ ಸೇನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲೆಂಕೆನ್ನವರ ಇವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಎಸ್. ಯತಿರಾಜ್ ನಾಯ್ಡು ತಿಳಿಸಿದ್ದಾರೆ.
ಕನ್ನಡ ನಾಡು ನುಡಿ, ಗಡಿ, ಜಲ ಸಂರಕ್ಷಣೆಯ ವಿಚಾರದಲ್ಲಿ ನಿಮ್ಮ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುವುದರ ಮೂಲಕ ನಾಡದ್ರೋಹಿಗಳಿಗೆ ಸಿಂಹಸ್ವಪ್ನವಾಗಿ ನಾಡ ಪ್ರೇಮಿಗಳಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕಕ್ಕಾಗಿ ನಾವು.. ನಮಗಾಗಿ ಕರ್ನಾಟಕ ಎನ್ನುವ ಧ್ಯೇಯ ವಾಕ್ಯದಂತೆ ನಾಡಿನ ಅಭಿವೃದ್ದಿಗೆ ಕಾರ್ಯಪ್ರವೃತ್ತರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.