RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ

ಗೋಕಾಕ:ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ 

ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ

ಗೋಕಾಕ ಸೆ 17 : ಜೈನ ಧರ್ಮದಲ್ಲಿ ಹತ್ತು ದಿನಗಳ ವರೆಗೆ ದಶಲಕ್ಷಣಾ ಪರ್ವ ಆಚರಿಸುತ್ತಾರೆ. ಪರ್ವ ಎಂದರೆ ಹಬ್ಬ ಈ ಹಬ್ಬದಲ್ಲಿ ಆತ್ಮ ಕಲ್ಯಾಣ ಮಾಡಿಕೊಳ್ಳುವದು ಮುಖ್ಯವಾಗಿರುತ್ತದೆ. ಇದರಲ್ಲಿ ಉಪವಾಸ ವೃತಗಳಿಗರ ಪ್ರಾಮುಖ್ಯತೆ ಇರುತ್ತದೆ. ದಿನನಿತ್ಯದ ಬದುಕಿನಲ್ಲಿ ಕರ್ಮಬಂದಗಳನ್ನು ಅಚಿಟಿಸಿಕೊಂಡಿರುವ ಆತ್ಮಗಳನ್ನು ಸ್ವಚ್ಛಗೊಳಿಸುವ ಪ್ರಕ್ರೀಯೆ ನಡೆಯುತ್ತಿದೆ ಎಂದು ಧಾರವಾಡದ ಜೆಎಸ್‍ಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ,ಜೀನದತ್ತ ಹಡಗಲಿ ಹೇಳಿದರು.
ತಾಲೂಕಿನ ಕೊಣ್ಣೂರಿನಲ್ಲಿ ರವಿವಾರದಂದು ಸಂಜೆ ನಡೆದ ದಶಲಕ್ಷಣಾ ಪರ್ವದ 3ನೇ ದಿನದ ಕರ್ಮವಾದ ಆರ್ಜವ ಕರ್ಮವನ್ನು ಕುರಿತು ಮಾತನಾಡಿದ ಅವರು, ಆರ್ಜವ ಎಂದರೆ ಸು:ಖ ದು:ಖಗಳು ಬಂದೊದಗಿದಾಗ ಸಮಚಿತ್ತದಿಂದ ಇರುವದು. ಮೊಸದಿಂದ ಅನ್ಯಾಯದಿಂದ ಜೀವನವನ್ನು ನಡೆಸದೇ ಸತ್ಯ ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ. ಮೋಸಕ್ಕೆ ಆಸೆಯೆ ತಂದೆ, ಅಜ್ಞಾನವೇ ತಾಯಿ, ದುರ್ಜನ ಸಹವಾಸವೇ ಸಹೋದರ ಹೀಗಾಗಿ ಆಸೆ, ಅಜ್ಞಾನ, ದುರ್ಜನರ ಸಹವಾಸದಿಂದ ದೂರವಿರುವದೇ ಮುಖ್ಯ ಎಂದರು.
ಇದರೊಂದಿಗೆ ಸಂಸ್ಕಾರದ ಬಗ್ಗೆ ವಿವರ ನೀಡಿದ ಅವರು, ಸಂಸ್ಕಾರದಲ್ಲಿ ಮೂರು ರೀತಿಯ ಸಂಸ್ಕಾರವಿದ್ದು ಜನ್ಮ ಜನ್ಮಾಂತರ ಸಂಸ್ಕಾರ, ಗರ್ಬ ಸಂಸ್ಕಾರ, ಸಂಘ ಸಂಸ್ಕಾರ ಇವುಗಳ ವಿವರಣೆಯನ್ನು ಉದಾಹರಣೆ ಸಹಿತ ವಿವರಿಸಿದರು. ಜೈನ ಧರ್ಮ ದಾನಕ್ಕೆ ಹೆಸರುವಾಸಿಯಾದದ್ದು. ಪ್ರಾಮಾಣಿಕತೆಯಿಂದ ದುಡಿದದ್ದರಲ್ಲಿ ಸತ್ಪಾತ್ರಕ್ಕೆ ಧಾನ ಮಾಡಿದಾಗ ಕಂಡಿತ ಅದರ ಪ್ರತಿಫಲ ಸಿಗುತ್ತದೆ ಎಂಬ ವಿವರಣೆ ನೀಡಿದರು.
ಕಾರ್ಯಮದ ದಿವ್ಯ ಸಾನಿಧ್ಯವನ್ನು 105 ಸುಭದ್ರಮತಿ ಮಾತಾಜಿ ವಹಿಸಿದ್ದರು.
ಸಂಜೀವ ಖನಗಾವಿ, ದೇವರಾಜ ಕಲಗೌಡರ, ಅಶೋಕ ಪಾಟೀಲ, ಬುಜಬಲಿ ಖನಗಾವಿ, ಸೇರಿದಂತೆ ಕೊಣ್ಣೂರು ಜೈನ ಸಮಾಜದ ಬಾಂಧವರು ಇದ್ದರು.

Related posts: