ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.!
ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದರತ್ತ ಬ್ಯಾನರ್‍ಗಳ ಅಬ್ಬರ.!
*ಗ್ರಾಮದೆಲ್ಲಡೆ ಝಗಮಗಿಸುವ ವಿದ್ಯುತ್ ದೀಪಗಳು * ಎಲ್ಲರ ಮನ-ಮನೆಗಳಲ್ಲಿ ಜಾತ್ರೆಯ ಸಂಭ್ರಮ
* ಅಡಿವೇಶ ಮುಧೋಳ. ಬೆಟಗೇರಿ
ಇಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳೇ…ಸಂಜೆಯಾದರೇ ಸಾಕು ಝಗಮಗಿಸುವ ವಿದ್ಯುತ್ ದೀಪಗಳು… ಸಂಭ್ರಮದಿಂದ ಓಡಾಡುವ ಗ್ರಾಮಸ್ಥರು.! ಇದೇನು ಅನ್ನುತ್ತಿರಾ..? ಇದು ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಗ್ರಾಮದ ಎಲ್ಲಡೆ ಎತ್ತನೋಡಿದತ್ತ ಸ್ವಾಗತ ಕೂರುವ ಕಟೌಟ್‍ಗಳು ಕಾಣುತ್ತಿವೆ.!
ಗ್ರಾಮದ ಗ್ರಾಮಸ್ಥರೆಲ್ಲಾ ಜಾತ್ಯಾತೀತವಾಗಿ ನಡೆದುಕೊಳ್ಳುವ ದೇವರು ದ್ಯಾಮವ್ವದೇವಿ ಆಗಿದ್ದಾಳೆ. ಐದುವರ್ಷಕ್ಕೂಮ್ಮೆ ಐದುದಿನಗಳ ಕಾಲ ಇದೇ ಸೋಮವಾರ ಆ.6ರಿಂದ 10ರವರೆಗೆ ಶ್ರದ್ಧಾ, ಭಕ್ತಿ, ಸಡಗರ, ಅದ್ಧೂರಿಯಿಂದ ಸ್ಥಳೀಯರು ಈ ಭಾರಿ ಜಾತ್ರಾ ಮಹೋತ್ಸವ ಆಚರಿಸಲು ಅಣಿಯಾಗಿದ್ದಾರೆ. ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಭಕ್ತರಿಂದ ರಾಸಾಯನಿಕ ರಹಿತ ಗುಣಮಟ್ಟದ 5 ಟನ್‍ಗೂ ಅಧಿಕ ಭಂಡಾರ ಹಾರಿಸುವ ನಿರೀಕ್ಷೆ ಇದೆ.
ಗ್ರಾಮದ ವಿವಿಧಡೆ ಇರುವ ಖುಲ್ಲಾ ಜಾಗೆಯಲ್ಲಿ ಪಳಾರ, ವಿವಿಧ ಸ್ಟೇಶನರಿ ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ವ್ಯಾಪಾರಸ್ಥರಿಗೆ ಒಂದೇ ಸೂರಿನಡೆ ಮತ್ತು ಚಿಕ್ಕ ಮಕ್ಕಳಿಗೆ ಮನರಂಜನೆಗಾಗಿ ವಿಶೇಷ ಜೋಕಾಲಿ ಸೇರಿದಂತೆ ಮತ್ತೀತರ ಆಟಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಆಟಿಕೆಗಳ ಉಪಕರಣಗಳ ಜೋಡಣೆಯ ಕೆಲಸ ಜೋರಾಗಿದೆ.
ಝಗಮಗಿಸುವ ವಿದ್ಯುತ್ ದೀಪಗಳು: ಗ್ರಾಮದೇವಿಯ ಜಾತ್ರೆ ಪ್ರಯುಕ್ತ ಪುರದೇವರ ಎಲ್ಲ ದೇವಾಲಯ, ಇಲ್ಲಿಯ ವಿವಿಧ ಮಹಾನ್ ಪುರುಷರ ವೃತ್ತಗಳಿಗೆ ಅಲ್ಲದೇ ಗ್ರಾಮದ ಪ್ರಮುಖ ಬೀದಿ, ಓಣಿಗಳ ಪ್ರತಿ ಮನೆಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಿದ್ದರಿಂದ ಗ್ರಾಮ ರಂಗು ರಂಗಿನ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಎತ್ತನೋಡಿದತ್ತ ಕಟೌಟ್ : ಗ್ರಾಮದ ಯುವಕರು, ವಿವಿಧ ಸಂಘ-ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರ, ಗಣ್ಯರ ಮತ್ತು ಸ್ವಾಮಿಜಿಗಳ ಭಾವಚಿತ್ರವಿರುವ ಕಟೌಟ್‍ಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸರ್ವರನ್ನೂ ಸ್ವಾಗತಿಸುತ್ತಿವೆ. ವಿವಿಧ ಅಳತೆಗಳುಳ್ಳ ಸುಮಾರು 200ಕ್ಕೂ ಹೆಚ್ಚು ಬ್ಯಾನರ್‍ಗಳಿಂದ ಗ್ರಾಮ ತುಂಬಿತುಳುಕುತ್ತಿದೆ.

ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಪ್ರಯುಕ್ತ ಇಲ್ಲಿಯ ಅಂಬೇಡ್ಕರ್ ಸರ್ಕಲ್‍ನಲ್ಲಿ ಸರ್ವರನ್ನೂ ಸ್ವಾಗತಿಸುತ್ತಿರುವ ನೂರಾರು ಕಟೌಟ್‍ಗಳನ್ನು ಕಟ್ಟಿರುವದು.
ರಂಗು ರಂಗಾದ ಎಲ್ಲರ ಮನೆಗಳು: ಗ್ರಾಮದೇವತೆ ಜಾತ್ರೆ ಸಲುವಾಗಿ ಗ್ರಾಮಸ್ಥರು ಸುಮಾರು 10-15 ದಿನಗಳಿಂದ ತಮ್ಮ ಮನೆಗಳಿಗೆ ರಂಗು ರಂಗಿನ ಸುಣ್ಣ, ಬಣ್ಣ ಹಚ್ಚಿರುವದು, ಉಡುಗೆ, ತೊಡುಗೆ ಖರೀದಿಯು ಸಹ ಬಲು ಜೋರಾಗಿದೆ. ಎಲ್ಲರ ಮನ-ಮನೆಗಳಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಸುತ್ತಲಿನ ಹಳ್ಳಿಗಳಲ್ಲಿಯೇ ಗ್ರಾಮ ಗ್ರಾಮದೇವಿ ದ್ಯಾಮವ್ವಳ ಜಾತ್ರೆ ಜೋರಾಗಿ ನಡೆಯಲಿದೆ.
“ಸುಮಾರು 4-5 ಶತಮಾನಗಳ ನಂತರ 2ನೇ ಭಾರಿ ನಮ್ಮೂರ ಗ್ರಾಮದೇವಿ ದ್ಯಾಮವ್ವದೇವಿ ಜಾತ್ರೆ ನಡೆಯುತ್ತಿದೆ. ಧಾರ್ಮಿಕ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಭಯ, ಭಕ್ತಿ, ಸಡಗರದಿಂದ ಊರಿನ ಎಲ್ಲ ಜನರೂ ಸೇರಿ 5 ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ಆಚರಣೆ ಮಾಡುತ್ತೆವೆ. * ಪುಂಡಲೀಕಪ್ಪ ಪಾರ್ವತೇರ ಹಿರಿಯ ನಾಗರಿಕ ಬೆಟಗೇರಿ,
“ ಜಾಗೃತ ಜಾತ್ರೆಗೆ ಸರ್ವರನ್ನೂ ಸ್ವಾಗತಿಸು ಇಷ್ಟೂಂದು ಬ್ಯಾನರ್ ಮಾಡಿಸಿದ್ದೂ ಬೆಳಗಾವಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿಯೇ ಯಾರೂ ಇರಲಿಕ್ಕಿಲ್ಲ, ಸುಮಾರು 10-15 ದಿನಗಳಿಂದ ಗ್ರಾಮದೆಲ್ಲಡೆ ಯುವಕರು ನಾ…ಮುಂದೂ, ತಾ…ಮುಂದೂ ಅಂತಾ ಕಟೌಟ್‍ಗಳನ್ನು ಮಾಡಿಸಿ ಅವುಗಳನ್ನು ಕಟ್ಟಲು ಗ್ರಾಮದ ವಿವಿಧಡೆ ಹಲವು ದಿನಗಳ ಮುಂಚಿತವಾಗಿ ಜಾಗೆ ಗುರುತಿಸಿಕೊಂಡಿದ್ದು
ವಿಶೇಷ ಎನಿಸುವಂತಿದೆ.* ವಿಠಲ ಲಕ್ಷ್ಮಣ ಕೋಣಿ ಯುವ ಮುಖಂಡ ಬೆಟಗೇರಿ, ತಾ.ಗೋಕಾಕ.