RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ

ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ 

ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು : ಸಚಿವ ರಮೇಶ ಚಾಟಿ
ಬೆಳಗಾವಿ ಸೆ 6 : ಲಕ್ಷ್ಮೀ ಹೆಬ್ಬಾಳ್ಕರ ರಾಜಕೀಯದಲ್ಲಿ ಇದ್ದಾರೆ . ಆದರೆ ಅವರ ಹಿಂದಿನ ಸ್ಥಿತಿ ಏನೆಂಬುವದು ಯಾರಿಗೂ ಗೊತ್ತಿಲ್ಲ . ಅದನ್ನು ಹೇಳುವ ಅನಿರ್ವಾಯ ಈಗ ಬಂದಿದೆ ಎಂದು ಪೌರಾಡಳಿತ ಸಚಿವ ರಮೇಶ ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004 ರಿಂದ  ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯಕ್ಕೆ ಬಂದಿದ್ದಾರೆ. ಮೊದಲು ಅವರೇನಾಗಿದ್ದರು. ಇತಿಹಾಸ ಏನು. ಹೆಬ್ಬಾಳ್ಕರ್​ರನ್ನು  ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಡಿದ್ದು ಯಾರು ಎಂಬುದನ್ನು ಅರಿಯಲಿ ಎಂದು ಚಾಟಿ ಬೀಸಿದರು. 

ಸಹಾಯ ಮಾಡಿದ್ದನ್ನು ಯಾರಿಗೂ ಹೇಳಬಾರದು. ಆದರೆ, ಅನಿವಾರ್ಯವಾಗಿ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ್ಕರ್ ತಂದೆ ಅನಾರೋಗ್ಯಕ್ಕೆ ತುತ್ತಾದಾಗ ನಾನೇ ಸಹಾಯ ಮಾಡಿದ್ದೇನೆ.
 ಹೆಬ್ಬಾಳ್ಕರ್ ಸಹೋದರ, ಮಗನ ವಿಷಯದಲ್ಲಿ ಹಣಕಾಸಿನ ಸಹಾಯ ಮಾಡಿದ್ದೇನೆ.
 ಆದರೆ, ಅವರು ಈ ಮಟ್ಟಕ್ಕೆ ಕೀಳು ಪ್ರಚಾರ ಮಾಡುವುದು ಸರಿಯಲ್ಲ ಎಂದರು. 

ಜಾರಕಿಹೊಳಿ‌ ಕುಟುಂಬದ ಬಗ್ಗೆ ಅವಹೇಳನ ಸರಿಯಲ್ಲ. ಹೆಬ್ಬಾಳ್ಕರ್ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರೋದು ದುರ್ದೈವ. ಅವರು ನಮಗೆ ಸಾಲ ಕೊಟ್ಟಿದ್ದಾರೆ ಎನ್ನುವುದು ಊಹಾಪೋಹ.
 ಲಕ್ಷ್ಮೀ ಹೆಬ್ಬಾಳ್ಕರ್​ಗೆ ದೆಹಲಿ ಪರಿಚಯಿಸಿದ್ದು ನಾನು ಎಂದರು. 

ನಾನು ಸತೀಶ್​ ಜಾರಕಿಹೊಳಿ ಸೇರಿ‌ ಉಗ್ರ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಬಹುಮತ ಸಾಬೀತು ಮಾಡೊದು ದೊಡ್ಡದಲ್ಲ .ಚುನಾವಣೆ ವಿಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ. ಸತೀಶ್ ಜಾರಕಿಹೊಳಿಗೆ‌ ಅಪಮಾನ ಆದ್ರೆ ನಾನು ಅವರ ಜತೆಗೆ ಇರುತ್ತೇನೆ. ಅವರ ನಿರ್ಣಯಕ್ಕೆ ನಾನು ಬದ್ಧ ಎಂದು ತಿಳಿಸಿದರು. 

ಇನ್ನು ಬೆಳಗಾವಿ ತಾಲೂಕಿನ ಮಹಾತ್ಮಾ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪಿಡಿಒ ಸಭೆ ಕರೆದು ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದರು. 

Related posts: