RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ

ಗೋಕಾಕ:ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ 

ಎ.ಬಿ,ಪತ್ತಾರ ಅವರ ಕಾರ್ಯ ಶ್ಲಾಘನೀಯ : ಎಚ್.ಎಮ್.ಶಿವುಕುಮಾರ

ಗೋಕಾಕ ಜು 31 : ಜೀವದ ಹಂಗು ತೊರೆದು, ಜೀವ ಹಾಗೂ ಆಸ್ತಿಗಳನ್ನು ರಕ್ಷಿಸುವ ಪವಿತ್ರ ಕಾರ್ಯವನ್ನು ಮಾಡುವ ಆಗ್ನಿ ಶಾಮಕ ಇಲಾಖೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಇಲಾಖೆಯ ಗೌರವವನ್ನು ಹೆಚ್ಚಿಸುವಂತೆ ಬೆಳಗಾವಿ ಜಿಲ್ಲಾ ಆಗ್ನಿ ಶಾಮಕ ಅಧಿಕಾರಿ ಎಚ್.ಎಮ್.ಶಿವುಕುಮಾರ ಹೇಳಿದರು.
ಮಂಗಳವಾರದಂದು ಇಲ್ಲಿಯ ಆಗ್ನಿ ಶಾಮಕ ಠಾಣೆಯಲ್ಲಿ ಸಹಾಯಕ ಆಗ್ನಿ ಶಾಮಕ ಠಾಣಾಧಿಕಾರಿ ಎ.ಬಿ,ಪತ್ತಾರ ಅವರ ಸೇವಾ ನಿವೃತ್ತಿಯನ್ನು ಹೊಂದಿದ ನಿಮಿತ್ಯ ಹಮ್ಮಿಕೊಂಡ ಬಿಳ್ಕೂಡುವ ಸಮಾರಂಭದಲ್ಲಿ ಅವರನ್ನು ಸತ್ಕರಿಸಿ ಮಾತನಾಡುತ್ತಿದ್ದರು.
ಇಲಾಖೆಯಲ್ಲಿ ಪತ್ತಾರ ಅವರು ಶಿಸ್ತು-ಬದ್ಧತೆಯಿಂದ ಮಾದರಿಯಾಗಿ ಕಾರ್ಯನಿರ್ವಹಿಸಿ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿವು ಮುಂದೆಯೂ ಕೂಡಾ ಅವರ ನಡೆದ ಮಾರ್ಗದಲ್ಲಿಯೇ ಕಾರ್ಯನಿರ್ವಹಿಸುವಂತೆ ಕರೆ ನೀಡಿದ ಅವರು ಪತ್ತಾರ ಅವರ ನಿವೃತ್ತಿ ಬದುಕು ಸುಖಮಯವಾಗಿ ಸಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಗ್ನಿ ಶಾಮಕ ಠಾಣೆಯ ಪ್ರಾದೇಶಿಕ ಅಧಿಕಾರಿ ಡಿ.ದೇವರಾಜ, ಕೆಎಲ್‍ಇ ಶಾಲೆಯ ಪ್ರಾಚಾಂರ್ಯೆ ಅನುಪಾ ಕೌಶಿಕ, ಶಿಕ್ಷಕ ಪ್ರಕಾಶ ಪಾಟೀಲ, ನ್ಯಾಯವಾದಿ ಮಹೇಶ ಹಿರೇಮಠ, ಸಹಾಯಕ ಆಗ್ನಿ ಶಾಮಕ ಠಾಣಾಧಿಕಾರಿಗಳಾದ ಡಿ.ಎಮ್.ಪೀರಜಾದೆ, ಅಣ್ಣಪ್ಪ ರುದ್ರಗೌಡ, ರಾಚಯ್ಯ ಪೂಜೇರಿ ಇದ್ದರು. ಲಕ್ಷ್ಮಣ ಬನವಿ ಸ್ವಾಗತಿಸಿ ವಂದಿಸಿದರು.

Related posts: