RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಅಂಬಿರಾವ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದರೆ ಅವರನ್ನು ಹೋರ ಕಳಿಸಲು ನಾನು ಸಿದ್ದ : ಮಾಜಿ ಸಚಿವ ರಮೇಶ

ಗೋಕಾಕ:ಅಂಬಿರಾವ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದರೆ ಅವರನ್ನು ಹೋರ ಕಳಿಸಲು ನಾನು ಸಿದ್ದ : ಮಾಜಿ ಸಚಿವ ರಮೇಶ 

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ

ಅಂಬಿರಾವ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದರೆ ಅವರನ್ನು ಹೋರ ಕಳಿಸಲು ನಾನು ಸಿದ್ದ : ಮಾಜಿ ಸಚಿವ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 26 :

 

 

ಅಂಬಿರಾವ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದರೆ ಅವರನ್ನು ಹೋರ ಕಳಿಸಲು ನಾನು ಸಿದ್ದ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗುರುವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಕರೆದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬಿರಾವ್ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದರೆ ಅವರನ್ನು ಹೋರ ಕಳಿಸಲು ನಾನು ಸಿದ್ದ ಎಂದು ಹೇಳಿ ಕಾರ್ಯಕರ್ತರ ಅಭಿಪ್ರಾಯ ಕೇಳಿದಾಗ ಅವರೆಲ್ಲರೂ ಒಕ್ಕೋರಲಿಂದ ಅವರಿಂದ ಯಾವುದೇ ಅನ್ಯಾಯವಾಗಿಲ್ಲ ಅವರು ಇಲ್ಲಿಯೆ ಇರಲಿ ಎಂದು ಹೇಳಿದರು

ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ನನ್ನ ಹಿನ್ನಡೆಗೆ ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅರ್ನಹತೆಯ ಗೊಂದಲ ಸೃಷ್ಟಿಸುತ್ತಿದ್ದಾರೆ ಜನತೆ ಇದಕ್ಕೆ ಕಿವಿಗೋಡಬೇಡಿ ಇನ್ನೆರಡು ದಿನಗಳಲ್ಲಿ ಒಳ್ಳೆಯ ಸುದ್ದಿ ನೀಡುವದಾಗಿ ತಿಳಿಸಿದರು
ನನ್ನವರೆಂದು ನಂಬಿದವರೆ ನನ್ನ ವಿರುದ್ಧ ಷಡೆಂತ್ರ ರೂಪಿಸುತ್ತಿದ್ದಾರೆ ಸತೀಶ ನನ್ನನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದು, ಈಗ ಲಖನ್ ವಿರೋಧಿಸುತ್ತಿರುವದು ನನಗೆ ನೋವು ಉಂಟಾಗಿದೆ.ಕ್ಷೇತ್ರದ ಜನತೆಯ ಆರ್ಶಿವಾದದಿಂದ ಕಳೆದ ಐದು ಬಾರಿ ಶಾಸಕನಾಗಿ ,ಮಂತ್ರಿಯಾಗಿ ರಾಜಕೀಯವಾಗಿ ಬೆಳೆಯುತ್ತಿದ್ದೇನೆ ಎಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸೋಮವಾರ ಮುಂಜಾನೆ 10 ಘಂಟೆಗೆ ನಾಮಪತ್ರ ಸಲ್ಲಿಸಲಿದ್ದು ಜನತೆ ಯಾವುದೆ ಗೊಂದಲಕ್ಕೆ ಒಳಗಾಗದೆ ಎಲ್ಲರು ಸಂಘಟಿತರಾಗಿ ಒಂದು ಲಕ್ಷ ಜನ ಸೇರಲಿದ್ದು ಈ ಬಾರಿ ನಿಮ್ಮೆಲ್ಲರ ಆರ್ಶಿವಾದದಿಂದ 1 ಲಕ್ಷ 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಆಯ್ಕೆಯಾಗುವುದಾಗಿ ತಿಳಿಸಿದರು

Related posts: