RNI NO. KARKAN/2006/27779|Wednesday, April 29, 2026
You are here: Home » breaking news » ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ 

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

 

ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸಮೀಪದ ಕಲ್ಲೋಳಿ ಗ್ರಾಮದಲ್ಲಿ ಶನಿವಾರ ಸಂಜೆ ಜರುಗಿದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಭಿವೃದ್ಧಿಯೇ ಮೂಲಮಂತ್ರ ಎಂಬಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನಾಧ್ಯತೆ ನೀಡಲಾಗಿದೆ. ಈ ಮೊದಲು ಗ್ರಾಮ ಪಂಚಾಯತಿಯಾಗಿದ್ದ ಕಲ್ಲೋಳಿ ಈಗ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಎಂದಿಗೂ ರಾಜಕೀಯ ಬೆರೆಸಬೇಡಿ. ಜನರ ಹಿತಾಸಕ್ತಿಗೆ ಅನುಗುಣವಾಗಿ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಕೆಲಸ ನಿರ್ವಹಿಸುವಂತೆ ಸ್ಥಳೀಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಜಾತ್ರೆಗಳು ನಮ್ಮ ದೇಶದ ಸಾಂಸ್ಕøತಿಕ ವೈಭವವನ್ನು ನೆನಪಿಸುತ್ತದೆ. ಇದರಿಂದ ನಾವು ಕಳೆದು ಹೋದ ಬಾಲ್ಯದ ನೆನಪುಗಳು ಮರುಕಳಿಸುತ್ತದೆ. ಅಲ್ಲದೇ ಪರಂಪರೆ, ಇತಿಹಾಸವನ್ನು ನೆನಪಿಸುತ್ತದೆ. ಜಾತ್ರೆಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರೆ ನಮ್ಮ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಯುವ ಧುರೀಣರಾದ ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರಭಾಶುಗರ ನಿರ್ದೇಶಕರಾದ ಮಹಾಂತೇಶ ಕಪ್ಪಲಗುದ್ದಿ, ಕೆಂಚಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಮಲ್ಲಪ್ಪ ಖಾನಾಪೂರ, ಬಿ.ಬಿ. ದಾಸನವರ, ಶಿವನಗೌಡ ಪಾಟೀಲ, ಭಗವಂತ ಪತ್ತಾರ, ಬಸವರಾಜ ಯಾದಗೂಡ, ಗಜಾನನ ಯರಗಣ್ವಿ, ಪಟ್ಟಣ ಪಂಚಾಯತ ಸದಸ್ಯರು, ಜಾತ್ರಾ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Related posts: