ಗೋಕಾಕ:ಭೀಕರ ಪ್ರವಾಹದಲ್ಲಿ ನೆರೆ ಸಂತ್ರಸ್ತರಿಗೆ ಶ್ರೀ ನಿಜಗುಣ ದೇವರು ಆಶ್ರಯ ನೀಡಿದ್ದು ಧಾರ್ಮಿಕ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ : ಶಾಸಕ ರಮೇಶ
ಭೀಕರ ಪ್ರವಾಹದಲ್ಲಿ ನೆರೆ ಸಂತ್ರಸ್ತರಿಗೆ ಶ್ರೀ ನಿಜಗುಣ ದೇವರು ಆಶ್ರಯ ನೀಡಿದ್ದು ಧಾರ್ಮಿಕ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 2 :
ಭೀಕರ ಪ್ರವಾಹದಲ್ಲಿ ನೆರೆ ಸಂತ್ರಸ್ತರಿಗೆ ಶ್ರೀ ನಿಜಗುಣ ದೇವರು ಆಶ್ರಯ ನೀಡಿದ್ದು ಧಾರ್ಮಿಕ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು ಗುರುವಾರದಂದು ಸಮೀಪದ ಹುಣಶ್ಯಾಳ ಪಿಜಿಯ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಮಾತಾ ಶ್ರೀ ಅನ್ನಪೂಣೇಶ್ವರಿ ನಿಲಯ ಉದ್ಘಾಟಿಸಿ ಮಾತನಾಡಿದರು.
ಶ್ರೀಮಠವು ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಾ ನಾಡಿನ ಸಮಸ್ತ ಭಕ್ತವೃಂದಕ್ಕೆ ಸಹಾಯ ಸಹಕಾರ ನೀಡುತ್ತಾ ಬಂದಿದೆ. ಅವರ ಜೊತೆಗೆ ಜಾರಕಿಹೊಳಿ ಮನೆತನವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದರು.
ಶ್ರೀಮಠದ ನಿಜಗುಣ ದೇವರು ಮಾತನಾಡಿ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ಅರಭಾವಿ ಶಾಸಕ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು ಮಾಜಿ ಸಚಿವ, ಕೆಎಲ್‍ಇ ಅಧ್ಯಕ್ಷ ಶಿವಾನಂದ ಕೌಜಲಗಿಯವರು ಸಹಕಾರವೇ ಕಾರಣ. ಆದ್ದರಿಂದ ಅವರು ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ,ಇವರ ಜೊತೆಗೆ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಹೋದರರ ಸಹಾಯ ಸಹಕಾರ ಅನನ್ಯವಾಗಿದೆ. ನಾಡಿನ ಹೆಸರಾಂತ ಸತ್ಪುರುಷರ ಆಶೀರ್ವಾದ,ಮಾರ್ಗದರ್ಶನದಿಂದ ನಾನು ಭಕ್ತರ ಇಚ್ಚೆಯಂತೆ ಆಧ್ಯಾತ್ಮಿಕ ಸೇವೆಗೈಯುತ್ತಿರುವೆ. ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಇಂಚಲದ ಡಾ: ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಶ್ರೀ ಪ್ರಭುದೇವರು, ಶ್ರೀ ಕೃಪಾನಂದ ಸ್ವಾಮಿಜಿ, ತೊಂಟಿಕಟ್ಟಿಯ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಗಣೇಶಾನಂದ ಮಹಾರಾಜರು, ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಮಹಾಂತೇಶ ತಾಂವಶಿ, ಬಸವರಾಜ ಮಾಳೇದ ಇದ್ದರು.