ಗೋಕಾಕ:ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ
ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ
ಬೆಟಗೇರಿ ಜು 23 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವದ ದಿನಗಳಲ್ಲಿ ಸ್ಥಳೀಯ ಯುವಕರು ಭಂಡಾರವನ್ನು ಅಪರಿಚಿತ ವ್ಯಕ್ತಿಗಳಿಗೆ, ಮಹಿಳೆಯರಿಗೆ, ಪರ ಗ್ರಾಮದ ಸಾರ್ವಜಿಕರಿಗೆ ಒತ್ತಾಯಪೂರ್ವಕವಾಗಿ ಎರಚಬಾರದು ಎಂದು ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಆಚರಣೆ ಸಮಿತಿಯ ಹಿರಿಯರಾದ ಶಿವಾಜಿ ನೀಲಣ್ಣವರ ಸಲಹೆ ನೀಡಿದರು.
ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ಸೋಮವಾರ ಜುಲೈ.23 ರಂದು ನಡೆದ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವ ಇದೇ ಅಗಸ್ಟ್.6 ರಿಂದ ಅಗಸ್ಟ್.10 ರವರೆಗೆ ಜರುಗಲಿರುವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ ಕುರಿತು ಹಮ್ಮಿಕೊಳ್ಳಲಾದ ಪೂರ್ವಭಾವಿ ಮಹಾಸಭೆಯಲ್ಲಿ ಮಾತನಾಡಿದ ಅವರು ಶಾಂತಿ, ಭಯ, ಭಕ್ತಿ, ಸೌಹಾರ್ದತೆ ಸಡಗರದಿಂದ ಜಾತ್ರಾ ಮಹೋತ್ಸವ ಆಚರಿಸಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ಗ್ರಾಮ ದೇವತೆ ಜಾತ್ರಾ ಮಹೋತ್ಸವ ಐದು ದಿನಗಳರವರೆಗೆ ಜರುಗಲಿರುವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಸೇರಿದಂತೆ ಮತ್ತೀತರ ಕಾರ್ಯಕ್ರಮಗಳ ಆಯೋಜನೆ ಕುರಿತು ಪೂರ್ವಭಾವಿ ಮಹಾಸಭೆಯಲ್ಲಿ ಎಲ್ಲ ಸಮುದಾಯದ ಹಿರಿಯರು, ಯುವಕರು ಚರ್ಚಿಸಿದರು.
ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ ಸಭೆಯ ದಿವ್ಯ ಸಾನಿಧ್ಯ ವಹಿಸಿದ ಅವರು ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿಯ ಶ್ರೀದೇವಿಯ ಭಾವ ಚಿತ್ರ ಮೂರ್ತಿ ಪೂಜೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು. ಇಲ್ಲಿಯ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಆಚರಣೆ ಸಮಿತಿಯ ಹಿರಿಯರಾದ ಲಕ್ಷ್ಮಣ ಸೋಮನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಮಣ್ಣ ಬಳಿಗಾರ, ಶ್ರೀಶೈಲ ಗಾಣಗಿ, ಮುತ್ತೆಪ್ಪ ವಡೇರ, ರಾಜು ಪತ್ತಾರ, ಬಾಳಪ್ಪ ಬಡಿಗೇರ, ವಿಠಲ ಕೋಣಿ, ಸುರೇಶ ಬಡಿಗೇರ, ಸದಾಶಿವ ಕುರಿ, ಲಕ್ಷ್ಮಣ ಚಂದರಗಿ, ವಿಠಲ ಚಂದರಗಿ, ಬಸವರಾಜ ಕುರಬೇಟ, ಹನುಮಂತ ವಡೇರ, ಬಸವರಾಜ ಪಣದಿ, ವೀರನಾಯ್ಕ ನಾಯ್ಕರ, ವಿಠಲ ಬಡಿಗೇರ, ಮಹಾದೇವ ಕಂಬಾರ, ಮುತ್ತೆಪ್ಪ ಕನೋಜಿ, ಬಸವರಾಜ ಬೆಟಗೇರಿ, ಸಂಜಯ ಪಣದಿ ಸೇರಿದಂತೆ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಶ್ರೀದೇವಿಯ ಭಕ್ತರು, ಇತರರು ಇದ್ದರು.
