RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ

ಗೋಕಾಕ:ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ 

ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ

ಗೋಕಾಕ ಜು 7 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರತಿಭಾನ್ವಿತರಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತಿರುವ ಗೋಕಾಕ ನಗರದ ಕೀರ್ತಿಯನ್ನು ಹೆಚ್ಚಿಸುವಂತೆ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ಹೇಳಿದರು.
ಶನಿವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕøತೀಕ ಚಟುವಟಿಕೆಗಳ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ವೇದಿಕೆಗಳ ಮೂಲಕ ಪ್ರದರ್ಶಿಸಬೇಕು. ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಬೇಕೆಂದು ಕರೆ ನೀಡಿದರು.
ವೇದಿಕೆ ಮೇಲೆ ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ವಕ್ಕುಂದ, ಮುಖ್ಯೋಪಾದ್ಯಯಿನಿ ಎಸ್.ಆರ್.ಮಹೇಂದ್ರಕರ, ಶಿಕ್ಷಕ ಎಮ್.ಸಿ.ವಣ್ಣೂರ ಇದ್ದರು.
ಶಿಕ್ಷಕಿ ಸ್ಮೀತಾ ಸುಣಧೋಳಿ ಸ್ವಾಗತಿಸಿದರು, ಬಿ.ಬಿ.ಕೊಚ್ಚರಗಿ ಹಾಗೂ ಸ್ಮೀತಾ ಭಂಡಾರಿ ನಿರೂಪಿಸಿದರು, ಎಸ್.ಎಸ್.ಚೋಪಾಡೆ ವಂದಿಸಿದರು.

Related posts: