RNI NO. KARKAN/2006/27779|Friday, April 19, 2024
You are here: Home » breaking news » ಗೋಕಾಕ:ಎಲ್ಲರೂ ಒಗ್ಗಟ್ಟಾಗಿ ಕರೋನಾ ವೈರಸ ತಡೆಗಟ್ಟಲು ಹೋರಾಡೋಣಾ : ಜಲಸಂಪನ್ಮೂಲ ಸಚಿವ ರಮೇಶ

ಗೋಕಾಕ:ಎಲ್ಲರೂ ಒಗ್ಗಟ್ಟಾಗಿ ಕರೋನಾ ವೈರಸ ತಡೆಗಟ್ಟಲು ಹೋರಾಡೋಣಾ : ಜಲಸಂಪನ್ಮೂಲ ಸಚಿವ ರಮೇಶ 

ಎಲ್ಲರೂ ಒಗ್ಗಟ್ಟಾಗಿ ಕರೋನಾ ವೈರಸ ತಡೆಗಟ್ಟಲು ಹೋರಾಡೋಣಾ : ಜಲಸಂಪನ್ಮೂಲ ಸಚಿವ ರಮೇಶ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :

 

 

ಎಲ್ಲರೂ ಒಗ್ಗಟ್ಟಾಗಿ ಕರೋನಾ ವೈರಸ ತಡೆಗಟ್ಟಲು ಹೋರಾಟ ಮಾಡಿ ಗೆಲ್ಲಬೇಕಾಗಿದೆ ಎಂದು ಜಲಸಂಪನ್ಮೂಲ ಸಚೌವ ರಮೇಶ ದ
ಜಾರಕಿಹೊಳಿ ಹೇಳಿದರು

ಶುಕ್ರವಾರದಂದು ನಗರದ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಮುಸ್ಲಿಂ ಸಮಾಜಕ್ಕೆ ಅಷ್ಟೇ ಅಲ್ಲ ಎಲ್ಲ ಸಮುದಾಯದವರು ಸಹ ಕಟ್ಟನಿಟ್ಟಾಗಿ ಸರಕಾರದ ಆದೇಶವನ್ನು ಪಾಲಿಸಿ ಸಮಾಜಿಕ ಅಂತರವನ್ನು ಕಾಯ್ದುಕೋಳಬೇಕು.

ದೆಹಲಿ ನಿಜಾಮೊದ್ದೀನ ಧಾರ್ಮಿಕ ಸಭೆಗೆ ಗೋಕಾಕದಿಂದ ಯಾರಾದರು ಹೋಗಿ ಬಂದಿದ್ದರೆ ಅಂತಹವರು ಸ್ವಯಂ ಪ್ರೇರಣೆಯಿಂದ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೋಳ್ಳಬೇಕು ಒಬ್ಬ ವ್ಯಕ್ತಿಯಿಂದ ಬಹಳಷ್ಟು ಜನರಿಗೆ ವೇರಸ್ ಹಬ್ಬುವದರಿಂದ ಯಾರು ಕೂಡಾ ಇದನ್ನು ಹಗುರವಾಗಿ ಪರಿಗಣಿಸದೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಿಂದ ಬೇರೆ ಜಿಲ್ಲೆ , ರಾಜ್ಯಗಳಿಗೆ ದುಡಿಯಲು ಹೋಗಿ ಗ್ರಾಮಗಳಿಗೆ ಯಾರಾದರೂ ಮರಳಿದರು ಸಹ ಅಂತಹವರನ್ನು ಸಹ ತಪಾಸಣೆ ಒಳಪಡಿಸಬೇಕು . ಎಲ್ಲರೂ ಟೀಂ ಆಗಿ ಒಗ್ಗಟಿನಿಂದ ಕಾರ್ಯಮಾಡಿ ಕೊರೋನಾ ವೈರಸ್ ತಡೆಗಟ್ಟಲು ಹೋರಾಡಬೇಕು .

ರೇಷನ , ಕಾಯಿಪಲ್ಲೆ ಸೇರಿದಂತೆ ಇತರ ಅವಶ್ಯಕ ವಸ್ತುಗಳ ಬಗ್ಗೆ ಯಾವದೆ ತಕರಾರು ಇದ್ದರೆ ನಮ್ಮ ಗಮನಕ್ಕೆ ತಂದರೆ ಅದನ್ನು ತಕ್ಷಣದಲ್ಲಿ ಸರಿಪಡಿಸಲಾಗದು. ಪ್ರತಿಯೊಬ್ಬರು ಎಚ್ಚರಿಕೆ ಯಿಂದ ಕಾರ್ಯನಿರ್ವಹಿಸಬೇಕು. ಪಕ್ಷಾತೀತವಾಗಿ ಕೊರೋನಾ ವೈರಸ್ ಬಗ್ಗೆ ಹೋರಾಟ ಮಾಡಿ ಕೊರೋನಾ ರೋಗದಿಂದ ಭಾರತವನ್ನು ರಕ್ಷಿಸಬೇಕು ನಿಮ್ಮ ಕಷ್ಟ ಸುಖದಲ್ಲಿ ಸರಕಾರ ಹಾಗೂ ನಾನು ಸಾದಾ ಭಾಗಿಯಾಗುತ್ತೆವೆ ಎಂದು ಸಚಿವರು ಹೇಳಿದರು

ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾತನಾಡಿ ಧಾರ್ಮಿಕ ಸಭೆಗೆ ತೆರಳಿದಾಗ ಲಾಕಡೌನ ಅದ ಪ್ರಯುಕ್ತ ಸಾಕಷ್ಟು ಜನರು ಅಲ್ಲಿಯೆ ಉಳಿದುಕೊಂಡಿದ್ದರು ಸರಕಾರದಿಂದ ಅಂತವರ ಲಿಸ್ಟ್ ಬಂದಿದೆ. ಆ ಲಿಸ್ಟ್ ಹೊರತು ಪಡಿಸಿ ಇನ್ನೂ ಯಾರಾದರು ಉಳಿದಿದ್ದರೆ ತಾಲೂಕಾಡಳಿತದ ಗಮನಕ್ಕೆ ತರಬೇಕು ಮನೆಯವರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಕೂಡ ಸಹಕರಿಸಬೇಕು ಈಗಾಗಲೇ ಹೊರ ದೇಶ , ಹೊರ ರಾಜ್ಯಗಳಿಂದ ಬಂದವರ ಆರೋಗ್ಯ ತಪಾಸಣೆ ಮಾಡಲಾಗಿ ಎಲ್ಲರೂ ಆರೋಗ್ಯವಾಗಿದ್ದಾರೆ ಆದಾಗ್ಯೂ ಸಹ ಹೆಚ್ಚಿನ ಸುರಕ್ಷತೆ ಹಿತದೃಷ್ಟಿಯಿಂದ ಕೆಲವರನ್ನು ಕ್ವಾರೋಟ್ವಾನನಲ್ವಿ ಇರಿಸಲಾಗಿದೆ ಅವರು ಸಹ ಆರೋಗ್ಯವಾಗಿದ್ದಾರೆ .ಕೊರೋನಾ ವೈರಸ್ ತಡೆಗಟ್ಟಲು ವೈದ್ಯರು , ಪೊಲೀಸರು, ಸಾರ್ವಜನಿಕರು ಸಹಕಾರ ಮುಖ್ಯವಾಗಿದೆ ಆ ನಿಟ್ಟಿನಲ್ಲಿ ಎಲ್ಲರೂ ತಾಲೂಕಾಡಳಿತಕ್ಕೆ ಸಹಕಾರ ನೀಡಿ ವೈರಸ ಹರಡದಂತೆ ಸಹಕರಿಸಬೇಕು ಎಂದು ಪ್ರಕಾಶ ಹೋಳೆಪ್ಪಗೋಳ ಹೇಳಿದರು.

ಆರೋಗ್ಯಾಧಿಕಾರಿ ಡಾ‌.ರವೀಂದ್ರ ಅಂಟಿನ ಮಾತನಾಡಿ ಕೊರೋನಾ ವೈರಸ್ ಹರಡುವ ಲಕ್ಷಣಗಳ ಬಗ್ಗೆ ಮತ್ತು ವೈರಸ್ ಹರಡದಂತೆ ಯಾವ ರೀತಿ ತಡೆ ಹಿಡಿಯ ಬಹುದು ಎಂಬುದರ ಬಗ್ಗೆ ಹೇಳಿದರು.

ಡಿ.ವಾಯ್ . ಎಸ್.ಪಿ ಪ್ರಭು ಡಿ.ಟಿ ಮಾತನಾಡಿ ಹೋರಗಡೆಯಿಂದ ಬಂದವರನ್ನು ವೈದ್ಯಕೀಯ ತಪಾಸಣೆಯನ್ನು ಮಾಡಿಕೊಳ್ಳದ ಯಾರನ್ನು ಮನೆಯಲ್ಲಿ ಸೇರಿಸಕೋಳ್ಳಬೇಡಿ. ಇಲ್ಲಿಯ ವರೆಗೆ 17 ಜನರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ ಎಲ್ಲರೂ ಸಹ ಆರೋಗ್ಯವಂತರಾಗಿದ್ದಾರೆ. ನಿಮ್ಮ ಕುಟುಂಬದ, ನಿಮ್ಮ ಹಿತದೃಷ್ಟಿಯಿಂದ ಸರಕಾರ ಕೈಗೊಂಡ ನಿರ್ಧಾರ ಅದನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಧಿಕಾರಿಗಳಾದ ಬಸವರಾಜ ಹೆಗ್ಗನಾಯಿಕ, ಜಿ‌.ಬಿ.ಬಳಗಾರ, ಅಜೀತ ಮನ್ನಿಕೇರಿ , ಗೋಪಾಲ ರಾಠೋಡ, ವೆಂಕಟೇಶ್ ಮುರನಾಳ, ಶಿವಾನಂದ ಹಿರೇಮಠ, ಮುಖಂಡರುಗಳಾದ ಎಸ. ಎ ಕೊತವಾಲ, ಅಬ್ಬಾಸ ದೇಸಾಯಿ, ಇಲಾಹಿ ಖೈರದಿ , ಜಾವೇದ ಗೋಕಾಕ, ಹಾಜಿ ಕಾಸೀಂಸಾಬ ಬಸ್ಸಾಪೂರ , ಜಾಕೀರ ಕುಡಚಿಕರ, ಸೇರಿದಂತೆ ಇತರರು ಇದ್ದರು

Related posts: