RNI NO. KARKAN/2006/27779|Friday, February 13, 2026
You are here: Home » breaking news » ಖಾನಾಪುರ:ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ

ಖಾನಾಪುರ:ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ 

ವಿಧ್ಯಾಭ್ಯಾಸಕ್ಕಾಗಿ ತಗೆದುಕೊಂಡ ವಿಧ್ಯಾರ್ಥಿಗಳ ಸಾಲಮನ್ನಾ ಮಾಡಿ: ಕಾಶೀಮ ಹಟ್ಟಿಹೊಳಿ

ಖಾನಾಪುರ ಜು 2 : ಸರಕಾರದ ಬಜೆಟ್ ಅಧಿವೇಶನದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿಯವರ ನಿರ್ಧಾರ ಸ್ವಾಗರ್ಹ. ಆದರೆ ಇದರ ಜೊತೆಗೆ ವಿದ್ಯಾರ್ಥಿಗಳು ಸಹ ವಿಧ್ಯಾಭ್ಯಾಸಕ್ಕಾಗಿ ತೆಗೆದುಕೊಂಡ ಸಾಲವನ್ನು ಮನ್ನಾ ಮಾಡಬೇಕೆಂದು ಕರ್ನಾಟಕ ವಿಶ್ವ‌ ನಿರ್ಮಾಣ ಸೇನೆಯ ಯುವ ಘಟಕದ ಕಾಶೀಮ ಹಟ್ಟಿಹೊಳಿ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ

ಪತ್ರಿಕೆಯೊಂದಿಗೆ ಮಾತನಾಡಿದ ಅವರು ವಿದ್ಯಾಭ್ಯಾಸದ ಸಂಧರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದಿದ್ದಾರೆ. ವಿಧ್ಯಾಭ್ಯಾಸ ಮುಗಿದ ಕೆಲವು ವಿದ್ಯಾರ್ಥಿಗಳಿಗೆ ತಕ್ಷಣ ಉದ್ಯೋಗ ದೊರಕಿದ್ದು, ಕೆಲವರಿಗೆ ಉದ್ಯೋಗ ಸಿಗುತ್ತಿಲ್ಲ. ಮೋದಲೆ ಬಡತನದ ಬವಣೆಯಲ್ಲಿ ಜೀವನ ಸಾಗಿಸುತ್ತಿರುವ ಅದೇಷ್ಟೋ ವಿದ್ಯಾರ್ಥಿಗಳಿಗೆ ಸಾಲದ ಹೊರೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದರಿಂದ ಕೆಲವೊಂದು ವಿದ್ಯಾರ್ಥಿಗಳು ಮಾನಸಿಕವಾಗಿ ಹತಾಶರಾಗುತ್ತಿದ್ದಾರೆ. ರೈತರ ಸಾಲಮನ್ನಾಗೆ ತಯಾರಿ ನಡೆಸಿರುವ ಸರಕಾರ ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡಬೇಕೆಂದು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಕಾಶಿಮ ಆಗ್ರಹಿಸಿದ್ದಾರೆ

Related posts: