ಬೆಳಗಾವಿ:ಪೀರನವಾಡಿಯ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ಹೆಸರಿಡಲು ಸರಕಾರದ ಮೇಲೆ ಒತ್ತಡ : ನಾರಾಯಣಗೌಡ
ಪೀರನವಾಡಿಯ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ಹೆಸರಿಡಲು ಸರಕಾರದ ಮೇಲೆ ಒತ್ತಡ : ನಾರಾಯಣಗೌಡ
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 31 :
ಪೀರನವಾಡಿಯಲ್ಲಿ ಪ್ರತಿಷ್ಠಾಪಿಸಿರು ವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣ ಸರ್ಕಲ್ ಎಂದು ನಾಮಕರಣ ಮಾಡುವಂತೆ ಸರಕಾರ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಹೇಳಿದರು
ಸೋಮವಾರದಂದು ಪೀರನವಾಡಿಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಷ್ಠಾಪಿಸಿರುವ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು
ವೃತ್ತ ಬೇರ ಹೆಸರಿನಲ್ಲಿ ಮತ್ತು ಮೂರ್ತಿ ಇನ್ನೋಬ್ಬರ ಹೆಸರಿನಲ್ಲಿ ಇರುವುದರಿಂದ ಗೊಂದಲ ಉಂಟಾಗುವುದು ಸಹಜ ಹಾಗಾಗಿ ಈ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ವೃತ್ತ ಎಂದು ನಾಮಕರಣ ಮಾಡಲು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗುವುದು ಎಂದು ಟಿ.ಎ ನಾರಾಯಣಗೌಡ ಹೇಳಿದರು.
ಯಾರ ಡೋನ್ನೆ ನಾಯಕನ ಅಪ್ಪಣೆ ಬೇಕಿಲ್ಲಾ : ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ವೃತ್ತ ಎಂದು ನಾಮಕರಣ ಮಾಡಲು ಯಾರ ಡೋನ್ನೆ ನಾಯಕನ ಅಪ್ಪಣೆ ಬೇಕಿಲ್ಲಾ , ಸರಕಾರ ಮತ್ತು ಜಿಲ್ಲಾಡಳಿತ ಈ ವೃತ್ತಕ್ಕೆ ಸಂಗೋಳ್ಳಿ ರಾಯಣ್ಣನ ವೃತ್ತ ಎಂದು ನಾಮಕರಣ ಮಾಡಲು ಕ್ರಮ ಜರುಗಿಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ನಾಯಕರಾದ ಆಂಜನಪ್ಪಾ , ಬಸವರಾಜ ಪಡಕೋಟ್ಟಿ, ಮಹಾದೇವ ತಳವಾರ , ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಬಾಗಲಕೋಟೆಯ ಜಿಲ್ಲಾಧ್ಯಕ್ಷ ರಮೇಶ ಬೂದ್ದನೂರ , ಸುರೇಶ ಗವ್ವನ್ನವರ, ಗಣೇಶ ರೋಕಡೆ, ರಾಮಾ ವಣ್ಣೂರ , ಬಾಳು ಜಿಡಗಿ, ರಮೇಶ ಕೋಲಕಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು