ಗೋಕಾಕ :7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ

7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ
ಗೋಕಾಕ ಜೂ 3 : ನಗರದ ಆನಂದ ಚಿತ್ರ ಮಂದಿರದ ಹತ್ತಿರದ ಗ್ಯಾಸ್ ಏಜೆನ್ಸಿ ಪಕ್ಕದ ಬಿಲ್ಡಿಂಗನಲ್ಲಿ ಅನಧಿಕೃತವಾಗಿ ಇಸ್ಪೀಟ್ ಮತ್ತು ಅಂಧರ ಭಾಹರ ಆಟದಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಗೋಕಾಕ ಶಹರ ಪೊಲೀಸರು ದಾಳಿ ನಡೆಸಿದ ಘಟನೆ ರವಿವಾರ ಸಾಯಂಕಾಲ ನಡೆದಿದೆ
ಹೊಸಪೇಟೆ ಗಲ್ಲಿಯಲ್ಲಿರುವ ನೇಗಿನಾಳ ಅವರ ಬಿಲ್ಡಿಂಗನಲ್ಲಿರುವ 7 ಸ್ಟಾರ್ ಕಬ್ಲ್ ಒಳಗೆ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಸುಮಾರು 20 ಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ಪೊಲೀಸರು ಅವರಿಂದ ಸುಮಾರು 45 ಸಾವಿರಕ್ಕೂ ಹೆಚ್ಚು ಹಣ , 16 ಮೋಬೈಲ , 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸುದೀರಕುಮಾರ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಐ ಹಳ್ಳೂರ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಯಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಶಹರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು , ವಿಠ್ಠಲ ತಟ್ಟಿಮನಿ, ಮಾರುತಿ ಕೊಳವಿ , ಜ್ಯೋತಿಬಾ ತಮದಡ್ಡಿ , ಮಂಜುನಾಥ ಗೋಂಧಳಿ, ಭೀಮಶೀ ಭಂಜತ್ರಿ, ಅಶ್ರಫ್ ದೇವಡಿ , ಯೂನೂಸ ವರ್ಗೆ, ರವಿ ದಳವಾಯಿ, ಪ್ರದೀಪ ನೇಗಿನಹಾಳ , ಚನ್ನಪ್ಪಾ , ಓಸ್ವಾಲ , ಮಲ್ಲೇಶ ಗೋಲ್ಲರ , ವೆಂಕಪ್ಪ ಕೊಂಚಿಕೊರವರ , ಗುರು ಪತ್ತಾರ, ಪ್ರವಿಣ ಚರಾಟೆ , ಗೋಪಿ ಬಾಗಲಕೋಟ , ಸದ್ದಾಂ ವರ್ಗೆ , ಅಶೋಕ ಹುಕ್ಕೇರಿ , ಭರತ ಓಸ್ವಾಲ , ಬಾಳುಗೌಡ ಬಾವಿಹರಳೆ, ಮೈಬೂಬ ಪಿರಜಾದೆ ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.