RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ

ಗೋಕಾಕ:ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ 

ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ

ಗೋಕಾಕ ಜೂ 20 : ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗೋಕಾಕ ತಾಲೂಕಾ ಘಟಕದ ವತಿಯಿಂದ ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರ ರವಿವಾರದಂದು ಜರುಗಲಿದೆ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಚನ್ನಪ್ಪ ಕೌಜಲಗಿ ಹೇಳಿದರು.
ಅವರು, ನಗರದ ತಮ್ಮ ಸ್ವಗೃಹದಲ್ಲಿ ಕರೇದ ಪತ್ರಿಕಾಗೊಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ರವಿವಾರದಂದು ಮುಂಜಾನೆ 9ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಜೆಎಸ್‍ಎಸ್ ಕಾಲೇಜು ಸಭಾಭವನ ತಲುಪಿ 17ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಗಣ್ಯ ವರ್ತಕ ಬಾಬುಗೌಡ ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ತಾಲೂಕಾ ಘಟಕದ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮುಖ್ಯಅತಿಥಿಗಳಾಗಿ ಪುಣೆಯ ಸಂಶೋಧಕ ಹಾಗೂ ಬಸವ ಕೇಂದ್ರ ಮುಖ್ಯಸ್ಥ ಡಾ.ಶಶಿಕಾಂತ ಪಟ್ಟಣ, ಅತಿಥಿಗಳಾಗಿ ವಿಶ್ವನಾಥ ಕಡಕೋಳ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಭಾಗವಹಿಸಲಿದ್ದಾರೆ.
ಈಗಾಗಲೇ ಪ್ರತಿಭಾ ಪುರಸ್ಕಾರಕ್ಕೆ ಸಮಾಜದ ಮಕ್ಕಳಿಂದ 40ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಮಾಜದ ಬಂಧುಗಳನ್ನು ಸತ್ಕರಿಸಲಾಗುವದು ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ ಹಿತ್ತಲಮನಿ, ಶಿವಪುತ್ರಪ್ಪ ಅಂಗಡಿ, ಸಂತೋಷ ಮಂತ್ರಣ್ಣವರ, ಚಂದ್ರು ಕೌಜಲಗಿ, ರಾಮೇಶ್ವರ ಕಲ್ಯಾಣಶೆಟ್ಟಿ, ಮಹಾದೇವಿ ಉಪ್ಪಿನ, ಹರ್ಷಿತಾ ಸವಣೂರ ಇದ್ದರು.

Related posts: