RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು

ಗೋಕಾಕ:ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು 

ಅಕ್ರಮ ವ್ಯವಹಾರದಲ್ಲಿ ಬಾಗಿ ಆರೋಪ : ಮೂವರು ಪೇದೆಗಳು ಅಮಾನತು
ಗೋಕಾಕ ಮೇ 26 : ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಗೋಕಾಕ ಗ್ರಾಮೀಣ ಠಾಣೆಯ ಇಬ್ಬರು ಮತ್ತು ರಾಮದುರ್ಗ ಪೊಲೀಸ್ ಠಾಣೆಯ ಒರ್ವ ಪೊಲೀಸ ಪೇದೆಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದೀರ ಕುಮಾರೆಡ್ಡಿ ಶುಕ್ರವಾರ ಆದೇಶ ಹೊರಡಿಸಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ

ಗೋಕಾಕ ಗ್ರಾಮೀಣ ಠಾಣೆಯ ಮುಖ್ಯ ಪೇದೆ ಮನೋಹರ ಗೋನಿ , ಪೇದೆ ಲಕ್ಷ್ಮಣ ದೇವರ ಹಾಗೂ ಇತ್ತೀಚೆಗೆ ರಾಮದುರ್ಗ ಠಾಣೆಗೆ ವರ್ಗಾವಣೆಗೊಂಡ ಸತೀಶ ಹೋಳೆಯಾಚೆ ಅಮಾನತುಗೊಂಡ ಪೊಲೀಸ ಸಿಬ್ಬಂದಿಗಳು

ಅಕ್ರಮ ಮರಳು ಸಾಗಾಣಿಕೆ ಮತ್ತು ಇನ್ನು ಹಲವು ವವ್ಯಹಾರಗಳಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿ ಗೋಕಾಕ ತಾಲೂಕಿನ ಕೈತನಾಳ ಗ್ರಾಮದ ಹನುಮಂತ ಪಾಟೀಲ ಎಂಬುವವರು ಮೆ 20 ರಂದು ಪೊಲೀಸ ವರಿಷ್ಠಾಧಿಕಾರಿಗಳಲ್ಲಿಗೆ ಲಿಖಿತ ದೂರ ಸಲ್ಲಿಸಿದರು . ದೂರಿನ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವರಿಷ್ಠಾಧಿಕಾರಿ ಸುದೀರಕುಮಾರ ರೆಡಿ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ

Related posts: