RNI NO. KARKAN/2006/27779|Tuesday, April 16, 2024
You are here: Home » breaking news » ಗೋಕಾಕ:ಗೋಕಾಕ-ಬೆಟಗೇರಿಗೆ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ

ಗೋಕಾಕ:ಗೋಕಾಕ-ಬೆಟಗೇರಿಗೆ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ 

ಗೋಕಾಕ-ಬೆಟಗೇರಿಗೆ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ
ಬೆಟಗೇರಿ ಸೆ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳ ನಾಗರಿಕರÀ ಬಹು ದಿನದ ಬೇಡಿಕೆಯಾದ ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ ಕಳೆದೆರಡು ತಿಂಗಳಿಂದ ಗೋಕಾಕದಿಂದ ಬೆಟಗೇರಿ ಗ್ರಾಮಕ್ಕೆ ಆರಂಭಗೊಂಡಿದ್ದರಿಂದ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಹಳ್ಳಿಗಳ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಬೆಟಗೇರಿ ಗ್ರಾಮಕ್ಕೆ ಬಂದಿಳಿದು ಇಲ್ಲಿಂದ ಬೇರೆ ಬೇರೆ ಊರುಗಳ ಕಡೆ ಪ್ರಯಾಣಿಸಲು ಬಸ್ ಸಾರಿಗೆ ಸೌಲಭ್ಯವಿಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದೂದಗಿತ್ತು.
ಈಗ ನಿತ್ಯ ಗೋಕಾಕ-ಬೆಟಗೇರಿಗೆ ಒಂದು ಬಸ್ ಐದು ಬಾರಿಯಂತೆ ಈಗ ಜನ ಸ್ನೇಹಿ ಸಾರಿಗೆ ಬಸ್‍ಗಳೆರಡು ಹತ್ತು ಸಾರಿ(ಟ್ರೀಪ್)ಮುಂಜಾನೆ 7.45 ಗಂಟೆಯಿಂದ ಬಿಡುವಿಲ್ಲದೇ ಸಂಜೆ ಐದು ಗಂಟೆ ತನಕ ಓಡಾಡುತ್ತಿವೆ. ಜನ ಸ್ನೇಹಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿದ ಎಲ್ಲ ಜನಪ್ರತಿನಿಧಿಗಳ, ಸಾರಿಗೆ ಇಲಾಖಾಧಿಕಾರಿಗಳ ಸೇವೆಯನ್ನು ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸ್ಥಳೀಯರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಗೋಕಾಕ ಸಾರಿಗೆ ಘಟಕದಿಂದ ಬೆಟಗೇರಿ ಗ್ರಾಮಕ್ಕೆ ಜನಸ್ನೇಹಿ ಸಾರಿಗೆ ಬಸ್‍ಗಳೆರಡು ಹತ್ತು ಸಾರಿ ಓಡಾಡುತ್ತಿವೆ. ಈಗ ಬಸ್‍ಗಳೆರಡಕ್ಕೂ ಉತ್ತಮ ಕಲೆಕ್ಷನ್ ಆಗುತ್ತಿದೆ. *ಎಸ್.ಎಸ್.ತಳವಾರ ವ್ಯವಸ್ಥಾಪಕ ಗೋಕಾಕ ಸಾರಿಗೆ ಘಟಕ.

“ಗೋಕಾಕ-ಬೆಟಗೇರಿ ಜನಸ್ನೇಹಿ ಬಸ್ ಸಾರಿಗೆ ಬಸ್‍ಗಳೆರಡು ಮುಂಜಾನೆಯಿಂದ ಸಂಜೆ ತನಕ ಓಡಾಡುತ್ತಿರುವುದರಿಂದ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಹಳ್ಳಿಗಳ ಪ್ರಯಾಣಿಕರಿಗೆ ಇಲ್ಲಿಂದ ಬೇರೆಡೆ ಪ್ರಯಾಣ ಬೆಳೆಸಲು ಅನುಕೂಲವಾಗಿದೆ.

ಪಿ.ಕೆ.ನೀಲಣ್ಣವರ ಹಿರಿಯ ನಾಗರಿಕ ಬೆಟಗೇರಿ, ತಾ. ಗೋಕಾಕ.

Related posts: