RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಎಸ್.ಎಸ್.ಎಲ್.ಸಿ ಫಲಿತಾಂಶ : ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ , ಮೇಲುಗೈ ಸಾಧಿಸಿದ ವನಿತೆಯರು

ಗೋಕಾಕ:ಎಸ್.ಎಸ್.ಎಲ್.ಸಿ ಫಲಿತಾಂಶ : ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ , ಮೇಲುಗೈ ಸಾಧಿಸಿದ ವನಿತೆಯರು 

ಎಸ್.ಎಸ್.ಎಲ್.ಸಿ ಫಲಿತಾಂಶ : ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ , ಮೇಲುಗೈ ಸಾಧಿಸಿದ ವನಿತೆಯರು

ಗೋಕಾಕ ಮೇ 7 : ಎಸ್.ಎಸ್.ಎಲ್.ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಗೋಕಾಕ ವಲಯ ಶೇ 94.7 ಪಡೆಯುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಿಟ್ಟಿಸಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ .

ಕಳೆದ ತಿಂಗಳು ನಡೆದ ಪರೀಕ್ಷೆಯಲ್ಲಿ ಗೋಕಾಕ ವಲಯದಿಂದ ಒಟ್ಟು 3962 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ 3752 ವಿದ್ಯಾರ್ಥಿಗಳು ತೆರ್ಗಡೆಯಾಗಿವುದರ ಮುಖೇನ ದಾಖಲೆ ಬರೆದಿದ್ದಾರೆ

ಗೋಕಾಕ ವಲಯದ ವಿದ್ಯಾರ್ಥಿಗಳು ಈ ಸಾಧನೆಗೆ ಸಚಿವ ರಮೇಶ ಜಾರಕಿಹೊಳಿ , ಜಿಲ್ಲಾ ಬಿಸಿಯೂಟ ಅಧಿಕಾರಿ ಜಿ.ಬಿ.ಬಳಗಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

ಹೆಣ್ಣಮಕ್ಕಳೇ ಸ್ಟ್ರಾಂಗ್ ಗುರು : ಗೋಕಾಕ ವಲಯ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸ ಆಗುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಸಾಭಿತು ಪಡೆಸಿದ್ದಾರೆ ಅಂತಿಮ ಪರೀಕ್ಷೆಗೆ ಹಾಜರಾದ ಒಟ್ಟು 1818 ಸಂಖ್ಯೆಯ ಪೈಕಿ 1762 (ಶೇ 96.92) ವಿದ್ಯಾರ್ಥಿನೀಯರು ತೆರ್ಗಡೆಯಾಗಿ ದಾಖಲೇ ಬರೆದಿದ್ದಾರೆ

Related posts: