ಗೋಕಾಕ: ಗೋಕಾಕ ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗೆ ಕರವೇ ಆಗ್ರಹ
ಗೋಕಾಕ ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ತಡೆಗೆ ಕರವೇ ಆಗ್ರಹ
ಗೋಕಾಕ ಮೇ 26: ವಾಯುವಿಹಾರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಗುರವಾರದಂದು ಪ್ರತಿಭಟನೆ ನಡೆಯಿಸಿ ಪಿ.ಎಸ್.ಆಯ್. ಗಣಪತಿ ಕೊಂಗನೋಳಿ ಅವರ ಮುಖಾಂತರ ಜಿಲ್ಲಾ ಪೊಲಿಸ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಗೋಕಾಕ ನಗರದ ಯೋಗಿಕೊಳ್ಳ ರಸ್ತೆ, ಮಹರ್ಷಿ ವಾಲ್ಮೀಕಿ ಕ್ರೀಡಾಂಗಣ, ಹಿಲ್ ಗಾರ್ಡನ ಅಣ್ಣಾ ರಸ್ತೆ, ಎ.ಪಿ.ಎಮ.ಸಿ.ಆವರಣ, ಚೌಡೇಶ್ವರಿ, ಕಡಬಗಟ್ಟಿ ರಸ್ತೆ ಸೇರಿದಂತೆ ಇನ್ನಿತರ ನಿರ್ಜನ ಪ್ರದೇಶಕ್ಕೆ ನೂರಾರು ಜನ ಸಾಯಂಕಾಲ ಮತ್ತು ಮುಂಜಾನೆ ವಾಯುವಿಹಾರಕ್ಕೆ ತೆರಳಿ ಯೋಗಾಸನ, ವ್ಯಾಯಮ ಸೇರಿದಂತೆ ಇನ್ನಿತರ ದೈಹಿಕ ಕಸರತಗಳನ್ನು ಮಾಡುತ್ತಾರೆ. ಆದರೆ ಹೀಗೆ ವಾಯುವಿಹಾರಕ್ಕೆಂದು ಬರುವ ಸಾರ್ವಜನಿಕರು ಕಳೆದ ಹಲವು ದಿನಗಳಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಾಯುವಿಹಾರಕ್ಕೆ ಹೋಗುವ ಸ್ಥಳಗಳಲ್ಲಿ ಕಿಡಗೇಡಿಗಳು ಸಾರಾಯಿ ಕುಡಿದು ಬಾಟಲಿಗಳನ್ನು ಎಲ್ಲಿಂದರಲ್ಲಿ ಎಸೆದು ಹೋಗಿರುತ್ತಾರೆ. ಇದರಿಂದ ವಾಯುವಿಹಾರ ಸ್ಥಳಗಳಲ್ಲಿ ಸಾರಾಯಿ ಬಾಟಲು ಟೆಟ್ರಾಪ್ಯಾಕಗಳು, ಸ್ನ್ಯಾಕ್ಸ್ ತಿಂದು ಬೀಸಾಡಿದ ಚೀಟುಗಳು ಕಾಣಸಿಗುತ್ತವೆ. ರಸ್ತೆ ಪಕ್ಕದಲ್ಲಿ ಬರಿ ಕಸ ತುಂಬಿ ತುಳುಕುತ್ತಿದೆ. ಇದರಿಂದ ಯೋಗಿಕೊಳ್ಳ ರಸ್ತೆ, ವಾಲ್ಮೀಕಿ ಕ್ರೀಡಾಂಗಣ, ಎ.ಪಿ.ಎಂ.ಸಿ. ಆವರಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರು ಅದರಲ್ಲಿಯೂ ವೃದ್ದರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಗರದ ವಾಯುವಿಹಾರದ ಸ್ಥಳಗಳಲ್ಲಿ ಪ್ರತಿನಿತ್ಯ ರಾತ್ರಿ 8 ರಿಂದ ಮದ್ಯರಾತ್ರಿ 11 ಗಂಟೆಯವರೆಗೆ ಗಸ್ತು ತಿರುಗುವ ವ್ಯವಸ್ಥೆಯನ್ನು ಜಾರಿ ತಂದು ವಾಯುವಿಹಾರಗಳಿಗೆ ತೊಂದರೆ ಕೊಟ್ಟು ಪರಿಸರವನ್ನು ಹಾಳು ಮಾಡುತ್ತಿರುವ ಕಿಡಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಕರವೇ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ ತಾ.ಕಾರ್ಯದರ್ಶಿ ಸಾಧಿಕ ಹಲ್ಯಾಳ ಉಪಾಧ್ಯಕ್ಷರಾದ ದೀಪಕ ಹಂಜಿ ಬಸವರಾಜ ಬೇಡರಟ್ಟಿ, ತಾ. ಸಂಚಾಲಕರಾದ ಹನೀಪಸಾಬ ಸನದಿ, ರೆಹಮಾನ ಮೊಕಾಶಿ, ರಮೇಶ ಕಮತಿ ಅರಭಾಂವಿ ಬ್ಲಾಕ್ ಉಪಾಧ್ಯಕ್ಷ ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ, ಲಕ್ಷ್ಮಣ ಗೊರಗುದ್ದಿ, ಕೆಂಪಣ್ಣಾ ಕಡಕೋಳ, ಮಲ್ಲಪ್ಪ ತಲೆಪ್ಪಗೋಳ, ಶಂಕರ ಹಾಲವ್ವಗೋಳ, ಮಲ್ಲು ಸಂಪಗಾರ, ಶಾನೂಲ ದೇಸಾಯಿ, ಪ್ರವೀಣ ಗುಡ್ಡಾಕಾಯು, ಬಸು ಗಾಡಿವಡ್ಡರ, ಅಜಿತ ಮಲ್ಲಾಪೂರೆ, ಸಂಜು ಗಾಡಿವಡ್ಡರ, ಲಕ್ಕಪ್ಪ ನಂದಿ, ಅಪ್ಪುಜಿ ನಾಯಕ, ರಮೇಶ ಮೇಸ್ತ್ರಿ, ಫಕೀರಪ್ಪ ಗಣಾಚಾರಿ, ಮುತ್ತೆಪ್ಪ ಘೋಡಗೇರಿ, ರಾಮ ಪಿಡಾಯಿ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು