ಗೋಕಾಕ:ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ

ಪ್ರಕಾಶ ಸೋನವಾಲ್ಕರ ನಾಮಪತ್ರ ಹಿಂದಕ್ಕೆ : ಭೀಮಪ್ಪ ಗಡಾದ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ
ಗೋಕಾಕ ಏ 27 : ವಿಧಾನಸಭಾ ಚುನಾವಣಾ ಕಾವು ದಿನೆ , ದಿನೆ ರಂಗೇರುತ್ತಿದ್ದು , ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಪರಿಣಾಮ ಅರಬಾಂವಿ ಮತಕ್ಷೇತ್ರದಿಂದ ಕೇವಲ ಒಂದು ನಾಮಪತ್ರ ಮಾತ್ರ ಹಿಂಪಡೆಯಲಾಗಿದೆ
ಅರಬಾಂವಿ ಕ್ಷೇತ್ರದಿಂದ ಜೆಡಿಎಸ ನಿಂದ ನಾಮಪತ್ರ ಸಲ್ಲಿಸಿದ ಪ್ರಕಾಶ ಸೋನವಾಲ್ಕರ ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಪಕ್ಷೇತರ ಮತ್ತು ಜೆಡಿಎಸ್ ದಿಂದ ನಾಮಪತ್ರ ಸಲ್ಲಿಸಿದ ಭೀಮಪ್ಪ ಗಡಾದ ಜೆಡಿಎಸ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದು ಅಚ್ಚರಿ ಮೂಡಿಸಿದ್ದಾರೆ
ಈ ಕ್ಷೇತ್ರದಿಂದ ಒಬ್ಬರೇ ನಾಮಪತ್ರ ಹಿಂಪಡೆದಿದ್ದರಿಂದ ಕೊನೆಯದಾಗಿ ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ
ಅರಬಾಂವಿ ಮತಕ್ಷೇತ್ರದಿಂದ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ
1) ಬಾಲಚಂದ್ರ ಜಾರಕಿಹೊಳಿ . ಬಿಜೆಪಿ , 2) ಅರವಿಂದ ದಳವಾಯಿ. ಕಾಂಗ್ರೇಸ , 3) ಭೀಮಪ್ಪ ಗಡಾದ . ಜಾತ್ಯಾತೀತ ಜನತಾದಳ , 4) ಆಶೋಕ ಹಣಜಿ . ಸರ್ವ ಜನತಾ ಪಕ್ಷ , 5) ಲಕ್ಷ್ಮಣ ತೋಳಿ . ಶಿವಸೇನಾ , 6) ಶಂಕರಗೌಡ ಪಡೆಸೂರ . ಎಂಇಪಿ , 7) ಚುನಪ್ಪ ಪೂಜೇರಿ . ಪಕ್ಷೇತರ , 8) ಭೀಮಪ್ಪ ನಾಯಿಕ . ಪಕ್ಷೇತರ