ಗೋಕಾಕ:ಡಿಸೆಂಬರ್ 22 ರಿಂದ ನಗರದಲ್ಲಿ ಅಂತರರಾಜ್ಯ ಮಟ್ಟದ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು

ಡಿಸೆಂಬರ್ 22 ರಿಂದ ನಗರದಲ್ಲಿ ಅಂತರರಾಜ್ಯ ಮಟ್ಟದ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು
ಗೋಕಾಕ ನ 24 : ಬರುವ ಡಿಸೆಂಬರ್ 22 ರಿಂದ 15 ದಿನಗಳ ಕಾಲ ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ದಿವಂಗತ ಲಕ್ಷ್ಮಣರಾವ ಜಾರಕಿಹೊಳಿ ಅವರ ಸ್ಮರಣಾರ್ಥ ಗೋಕಾಕ ನಗರದಲ್ಲಿ ಪ್ರಥಮ ಬಾರಿಗೆ ಅಂತರರಾಜ್ಯ ಮಟ್ಟದ ಲೇದರ್ ಬಾಲ್ ಎಲ್.ಆರ್.ಜೆ ಟಿ-20 ಟ್ರೋಫಿ ಪಂದ್ಯಾವಳಿಗಳು ಜರುಗಲಿವೆ ಎಂದು ಬಿ.ಸಿ.ಸಿ ಸದಸ್ಯ ಶಿವಾನಂದ ಗುಂಜಾಳ ಹೇಳಿದರು.
ಸೋಮವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್.ಆರ್.ಜೆ ಟಿ-20 ಪಂದ್ಯಾವಳಿ (ಸರಣಿ) ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಪ್ರಥಮ ಬಹುಮಾನದ ರೂಪದಲ್ಲಿ 2.51 ಲಕ್ಷ ರೂ ನಗದು ಹಾಗೂ ಒಂದು ಆಕರ್ಷಕ ಟ್ರೋಪಿ ನೀಡಲಾಗುವುದು. ಕಿಶೋರ ಶೆಟ್ಟಿ ಅವರ ವತಿಯಿಂದ ದ್ವಿತೀಯ ಬಹುಮಾನ ರೂಪದಲ್ಲಿ 1.51 ಲಕ್ಷ ರೂ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು.
ಟಿ-20 ಪಂದ್ಯಾವಳಿಯಲ್ಲಿ (ಸರಣಿ) ರಾಜ್ಯ ಮತ್ತು ಅಂತರರಾಜ್ಯದ ಖ್ಯಾತ ಆಟಗಾರರು ಭಾಗವಹಿಸಲ್ಲಿದ್ದಾರೆ. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಸರಣಿ ಅನುಮೋದಿಸಲ್ಲಪಟ್ಟಿದ್ದು, ಗೋಕಾಕ ಕ್ರಿಕೆಟ್ ಕ್ಲಬ್ ನವರು ಈ ಸರಣಿಯನ್ನು ಆಯೋಜಿಸಿದ್ದಾರೆ.
ಸರಣಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮಾನ್ಯತೆ ಪಡೆದ ನಿರ್ಣಾಯಕರು ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ಸರಣಿಯಲ್ಲಿ ಆಹ್ವಾನಿತ 15 ತಂಡಗಳು ಭಾಗವಹಿಸಲ್ಲಿದ್ದು, ಆಕರ್ಷಕ ವೈಯಕ್ತಿಕ ಬಹುಮಾನಗಳು ಈ ಪಂದ್ಯಾವಳಿ ಒಳಗೊಂಡಿದೆ.
ಸರಣಿ ಪುರುಷ ಒಂದು ಟಿ.ವ್ಹಿ.ಎಸ್.ಜೂಪೀಟರ್ ವಾಹನ,
ಅಂತಿಮ ಪಂದ್ಯದ ಪಂದ್ಯ ಪುರುಷ ನಗದು 21 ಸಾವಿರ ರೂಪಾಯಿ, ಸರಣಿಯ ಉತ್ತಮ ಬ್ಯಾಟರ, ಸರಣಿಯ ಉತ್ತಮ ಬಾಲರ್, ಸರಣಿಯ ಉತ್ತಮ ಕ್ಷೇತ್ರ ರಕ್ಷಕ ತಲಾ 10 ಸಾವಿರ ನಗದು ನೀಡಿ ಗೌರವಿಸಲಾಗುವುದು ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ 10 ಸಾವಿರ ಪಾವತಿಸಿ ಬಸವರಾಜ ಕತ್ತಿ ಮೊಬೈಲ್ ಸಂಖ್ಯೆ 9019923104 ಮತ್ತು ಮಹೇಶ್ ಗಣಾಚಾರಿ ಮೊಬೈಲ್ ಸಂಖ್ಯೆ 9110877108 ಸಂಪರ್ಕಿಸಬೇಕು ಎಂದು ಶಿವಾನಂದ ಗುಂಜಾಳ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅನಿಲ ಭವಾನಿ, ಕಿಶೋರ ಭಟ್, ಮಹೇಶ್ ಗಣಾಚಾರಿ, ಬಸವರಾಜ ಕತ್ತಿ, ದೀಪಕ ಕಲಾಲ್, ವಿಜಯ ಅರಬಾಂವಿ ಉಪಸ್ಥಿತರಿದ್ದರು.
