RNI NO. KARKAN/2006/27779|Saturday, February 14, 2026
You are here: Home » breaking news » ಬೆಳಗಾವಿ:ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ

ಬೆಳಗಾವಿ:ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ 

ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ
ಬೆಳಗಾವಿ ಏ 19: ಕಾಂಗ್ರೇಸ ಗೆ ಮತ ಹಾಕಿದರೆ ಅವರು ಬಾಬ್ರಿ ಮಸೀದ ನಿರ್ಮಿಸುತ್ತಾರಾ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

ಸುಳೇಬಾಂವಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿರುವ ಈ ವಿಡಿಯೋ ತುಣಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.

ಭಾರತ ಹಿಂದೂಗಳ ದೇಶ. ಹೀಗಾಗಿ ಈ ಸಲದ ಚುನಾವಣೆ ಚರಂಡಿ, ನೀರು, ರಸ್ತೆ ಸೇರಿದಂತೆ ಅಭಿವೃದ್ಧಿ ವಿಚಾರವಾಗಿ ನಡೆಯುತ್ತಿಲ್ಲ. ಹಿಂದೂ-ಮುಸ್ಲಿಂ ಧರ್ಮದ ವಿಚಾರವಾಗಿ ಈ ಚುನಾವಣೆ ನಡೆಯಲಿದೆ. ಬಿಜೆಪಿಗೆ ಮತ ನೀಡಿದ್ರೆ ರಾಮಮಂದಿರ ನಿರ್ಮಾಣವಾಗುತ್ತದೆ. ಕಾಂಗ್ರೆಸ್‍ಗೆ ಮತ ಹಾಕಿದ್ರೆ ಅವರು ಬಾಬ್ರಿ ಮಸೀದಿ ನಿರ್ಮಿಸುತ್ತಾರೆ. ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ. 

ಆದರೆ ರಾಮ ಮಂದಿರ ನಿರ್ಮಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದರೆ ನೀವು ಅವರಿಗೆ ಮತ ಚಲಾಯಿಸಿ. ಇದಕ್ಕೆ ನನ್ನದೇನು ಅಭ್ಯಂತರವಿಲ್ಲ ಎಂದಿರುವ ಅವರು, ಕಾಂಗ್ರೆಸ್‍ನವರ ಚಿಂತನೆ ಕೇವಲ ಬಾಬ್ರಿ ಮಸೀದಿ ನಿರ್ಮಾಣದ ಬಗ್ಗೆಯೇ ಇದೆ ಎಂದು ಆರೋಪಿಸಿದ್ದಾರೆ. 

Related posts: