RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ

ಬೆಳಗಾವಿ:ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ 

ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ

ಬೆಳಗಾವಿ ಮಾ 16: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಚುನಾವಣಾ ಸಮೀಪಿಸುತ್ತಿದ್ದಂತೆ ಭಿನ್ನಮತ ಸ್ವೋಟಗೊಂಡ ವಾತಾವರಣ ಉಂಟಾಗಿದೆ ಇದಕ್ಕೆ ಪುಷ್ಟಿ ಎಂಬಂತೆ ಇಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನ್ನೋಳಿ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ನೀಡಬಾರದು. ಎಂ.ಡಿ.ಲಕ್ಷ್ಮೀನಾರಾಯಣ ನನಗೆ ಟಿಕೆಟ್ ಸಿಗುತ್ತೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವನತಿಗೆ ಆರ್‌ಎಸ್ಎಸ್ ಕಾರಣ. ಆದ್ರೆ ಆರ್‌ಎಸ್ಎಸ್ ಮೂಲದಿಂದ ಬಂದಂತಹ ಎಂಎಲ್‌ಸಿ ಎಂ.ಡಿ.ಲಕ್ಷ್ಮಿನಾರಾಯಣಗೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ.

ಎಂ.ಡಿ.ಲಕ್ಷ್ಮಿನಾರಾಯಣ ನಿರಂತರವಾಗಿ ಶೋಭಾ ಕರಂದ್ಲಾಜೆ, ಬಿಎಸ್‌ವೈ ಮತ್ತು ಆರ್‌ಎಸ್ಎಸ್ ಮುಖಂಡರ ಸಂಪರ್ಕದಲ್ಲಿದ್ದಾರೆ. ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ ಆಗಿ ಕೆಲ್ಸಾ ಮಾಡುತ್ತಿದ್ದಾರೆ. ಆರ್‌ಎಸ್ಎಸ್ ಮತ್ತು ಬಿಜೆಪಿ ಹುನ್ನಾರದ ಫಲವಾಗಿ ಲಕ್ಷ್ಮಿನಾರಾಯಣ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಎಂದು ಶಂಕರ ಮುನ್ನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ

Related posts: