ಘಟಪ್ರಭಾ:ಪರಿಸರ ಸಂರಕ್ಷಿಸಲು ಮುಂದಾಗಿ : ಡಾ| ನಾಡೋಜ ಸಾಲು ಮರದ ತಿಮ್ಮಕ್ಕ ಕರೆ
ಪರಿಸರ ಸಂರಕ್ಷಿಸಲು ಮುಂದಾಗಿ : ಡಾ| ನಾಡೋಜ ಸಾಲು ಮರದ ತಿಮ್ಮಕ್ಕ ಕರೆ
ಘಟಪ್ರಭಾ ಫೆ 6 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀಮತಿ ಡಾ| ನಾಡೋಜ ಸಾಲು ಮರದ ತಿಮ್ಮಕ್ಕ ಅವರು ಶ್ರೀಮಠದ ಅಧಿಪತಿ ಶ್ರೀ ನಿಜಗುಣ ದೇವರ 25ನೇ ವರ್ಷ ಸಾಧನಾ ಸಂಭ್ರಮ ಮಹೋತ್ಸವದ ಪ್ರಯುಕ್ತ ಸವಿನೆನಪಿಗಾಗಿ ಶ್ರೀಮಠದಲ್ಲಿ 25 ಸಸಿಗಳನ್ನು ಹಚ್ಚಿದರು
ನಂತರ ಮಾತನಾಡಿದ ಸಾಲುಮರದ ತಿಮ್ಮಕ್ಕ ಅವರು ಪ್ರತಿಯೋಬ್ಬರು ಪರಿಸರ ಸಂರಕ್ಷಿಸಲು ಮುಂದಿಗಬೇಕು ಶ್ರೀಮಠವು ನಿಸರ್ಗದ ಮಡಿಲಲ್ಲಿ ಇರುವುದರಿಂದ ಭಕ್ತರ ಮನಸ್ಸಿಗೆ ನೆಮ್ಮದಿ ಮತ್ತು ಆಶ್ರಯವನ್ನು ನೀಡುತ್ತಿರುವುದು ಶ್ರೀಮಠದ ಪೂಜ್ಯರ ಮತ್ತು ಭಕ್ತರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮುಂಬರುವ 2019 ಜನೇವರಿಯಲ್ಲಿ ಶ್ರೀಮಠದಲ್ಲಿ ಜರುಗುವ 25ನೇ ವರ್ಷದ ಸಾಧನಾ ಸಂಭ್ರಮವು ವಿಜೃಂಭನೆಯಿಂದ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶ್ರೀಮಠ ನಿಜಗುಣ ದೇವರು ಮಾತನಾಡಿ ಶ್ರೀಮಠಕ್ಕೆ ನಾಡಿನ ಹರಗುರು ಚರಮೂರ್ತಿಗಳ, ಜಗದ್ಗುರುಗಳ, ಮಹಾನ್ ವ್ಯಕ್ತಿಗಳ, ವಿದ್ವಾಂಸರ ಪಾದಸ್ಪರ್ಶದಿಂದ ಈ ಕ್ಷೇತ್ರವು ಪಾವನ, ಪುಣ್ಯಮಯ ಕ್ಷೇತ್ರವಾಗಿದೆ. ಸಾಲುಮರದ ತಿಮ್ಮಕ್ಕ ಅವರು ಶ್ರೀಮಠ ಆಗಮಿಸಿದ್ದು ಸಂತೊಷದಾಯವಾಗಿದೆ ಎಂದರು.
ಶ್ರೀಮಠದ ವತಿಯಿಂದ ಶ್ರೀಮತಿ ಡಾ| ನಾಡೋಜ ಸಾಲು ಮರದ ತಿಮ್ಮಕ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.