ಬೆಳಗಾವಿ:21 ರಂದು ಸಾಹಿತಿ ಸುರಕೋಡ ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ವಿತರಣೆ : ಅಶೋಕ ಚಂದರಗಿ ಮಾಹಿತಿ
21 ರಂದು ಸಾಹಿತಿ ಸುರಕೋಡ ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ವಿತರಣೆ : ಅಶೋಕ ಚಂದರಗಿ ಮಾಹಿತಿ
ಬೆಳಗಾವಿ ಜು19 : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಷ್ಠಿತ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗದ ಶ್ರೀ ಹಸನ್ ನಯೀಮ್ ಸುರಕೋಡ ಅವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ದಿ 21 ರಂದು ರಾಮದುರ್ಗದಲ್ಲಿ ನಡೆಯಲಿದೆ ಎಂದು ಕನ್ನಡ ಹೋರಾಟಗಾರ, ಕನ್ನಡ ಕ್ರೀಯಾ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ ಚಂದರಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸರಕಾರ ಕಳೆದ ಮೇ 3 ರಂದು ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸಿತ್ತು ಆದರೆ 67 ವರ್ಷ ವಯಸ್ಸಿನ ಸುರಕೋಡ ಅವರು ಅನಾರೋಗ್ಯ ಕಾರಣದಿಂದ ಬೆಂಗಳೂರಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಿರಲಿಲ್ಲಾ
ಅವರಿಗೆ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭವನ್ನು ಬೆಳಗಾವಿಯಲ್ಲಿಯೇ ಇಟ್ಟುಕೊಳ್ಳಬೇಕೆಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಮನವಿ ಮಾಡಿ ಸತತವಾಗಿ ನಾಲ್ಕು ತಿಂಗಳಿನಿಂದ ಈ ಕುರಿತು ಆಗ್ರಹಿಸುತ್ತಿದ್ದರು
ಅವರ ಮನವಿಗೆ ಸ್ಪಂದಿಸಿರುವ ಸರಕಾರ ಮತ್ತು ಸಂಸ್ಕೃತಿ ಇಲಾಖೆ ಇದೇ ದಿ 21 ರಂದು ರಾಮದುರ್ಗ ತೆರಳಿ ಸಾಹಿತಿ ಸುರಕೋಡೆ ಅವರ ಮನೆಯಲ್ಲಿಯೇ ಪ್ರಶಸ್ತಿ ವಿತರಿಸಲು ನಿರ್ಧರಿಸಿದೆ ಎಂದು ಅಶೋಕ ಚಂದರಗಿ ತಿಳಿಸಿದ್ದಾರೆ
ಅಂದು ಮುಂಜಾನೆ 11:30 ಕ್ಕೆ ಸಂಸ್ಕೃತಿ ಇಲಾಖೆಯ ಉನತ್ತಾಧಿಕಾರಿಗಳು ಸುರಕೋಡೆ ಅವರ ಮನೆಗೆ ತೆರಳಿ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿಷ್ಠಿತ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ವಿತರಿಸಲಿದ್ದಾರೆ ಈ ಸರಳ ಸಮಾರಂಭದಲ್ಲಿ ನಾಡಿನ ಎಲ್ಲ ಸಾಹಿತ್ತಾಕ್ಷತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳಬೇಕೆಂದು ಕ್ರೀಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕೋರಿದ್ದಾರೆ
