RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ : ಎಐಸಿಸಿ ಕಾರ್ಯದರ್ಶಿ ಸತೀಶ

ಗೋಕಾಕ:ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ : ಎಐಸಿಸಿ ಕಾರ್ಯದರ್ಶಿ ಸತೀಶ 

ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ : ಎಐಸಿಸಿ ಕಾರ್ಯದರ್ಶಿ ಸತೀಶ
ಗೋಕಾಕ ಜ 21 : ಸಾಂಸ್ಕಂತಿಕ ಕಾರ್ಯಕ್ರಮಗಳಿಗೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗೋಕಾಕ ನಾಡಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶ ವಿದೇಶಗಳಲ್ಲಿ ಸತೀಶ ಶುಗರ್ಸ ಅವಾಡ್ರ್ಸ ಕಾರ್ಯಕ್ರಮ ವಿಕ್ಷಿಸುವಂತಹ ಕಾರ್ಯವಾಗಿದೆ ಎಂದು ಶಾಸಕ ಹಾಗೂ ಸತೀಶ ಶುಗರ್ಸ ಅವಾಡ್ರ್ಸ ರೂವಾರಿ ಸತೀಶ ಜಾರಕಿಹೊಳಿ ಹೇಳಿದರು.

ಅವರು, ಭಾನುವಾರದಂದು ಸಂಜೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಷ್ಟೇ ಕಷ್ಟ ಬಂದರೂ ಕೂಡಾ ನಿರಂತರವಾಗಿ ಕಳೆದ 17 ವರ್ಷಗಳಿಂದ ಕಾರ್ಯಕ್ರಮವನ್ನು ಮಾಡುತ್ತಾಬಂದಿದ್ದು ಇನ್ನೂ ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಸಿಕೊಂಡು ಹೊಗಲು ಜನರ ಸಹಕಾರ ಅತಿ ಅವಶ್ಯವಾಗಿದೆ.
ಸತೀಶ ಶುಗರ್ಸ ಅವಾಡ್ರ್ಸ ಮೂಲಕ ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರಸ್ತುತ ವರ್ಷ 4750 ವಿದ್ಯಾರ್ಥಿಗಳು ಪ್ರಥಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದ್ವಿತೀಯ ಹಂತದಲ್ಲಿ 1600 ವಿದ್ಯಾರ್ಥಿಗಳು, ಅಂತಿಮ ಹಂತದ ಸ್ಪರ್ಧೆಗಳಲ್ಲಿ 845 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸತೀಶ ಶುಗರ್ಸ ಅವಾಡ್ರ್ಸ ಕಾರ್ಯಕ್ರಮ ಕಳೆದ 17 ವರ್ಷಗಳಲ್ಲಿ ನಿರಂತರ ನಡೆಯುತ್ತ ಬಂದಿರುವದಲ್ಲಿ ಸಹಕರಿಸಿದ ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗುಲಾ ಹಾಗೂ ಅವರ ಸಂಗಡಿಗರು ಅದರಂತೆ ಗೋಕಾಕ ತಾಲೂಕಿನ ಜನತೆಗೆ ಅಭಿನಂದನೆ ಸಲ್ಲಿಸಿದರು.
ಕನ್ನಡ ಟಿ.ವಿ.ಚಾನಲಗಳಲ್ಲಿ ವೇದಿಕೆಯಿಂದ ಪ್ರವೀನ ಗಸ್ತಿ, ಲಕ್ಷ್ಮೀ ತಳವಾರ, ಸೇರಿದಂತೆ ಹಲವಾರು ಕಲಾವಿದರು ಆಯ್ಕೆಯಾಗಿದ್ದು ತಮ್ಮ ಪ್ರತಿಭೆಯನ್ನು ನಾಡಿಗೆ ತೊರಿಸಿಕೊಟ್ಟಿದ್ದಾರೆ. ಸತೀಶ ಶುಗರ್ಸ ವತಿಯಿಂದ ವರ್ಷದಲ್ಲಿ 9 ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಾ ಬಂದಿದ್ದಾರೆ. ಕಳೆದ 17 ವರ್ಷಗಳಲ್ಲಿ 50 ರಿಂದ 60 ಸಾವಿರ ಪ್ರತಿಭೆಗಳು ಈ ವೇದಿಕೆಯ ಮುಕೇನ ಪ್ರದರ್ಶನ ನೀಡಿದ್ದಾರೆ. ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರಕ್ಕಿಂತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.
ಕಳೆದ 17 ವರ್ಷಗಳಿಂದ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕಂತಿಕ ಕಾರ್ಯಕ್ರಮದ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡುವಲ್ಲಿ ಸ್ಥಳಿಯ ಚಿತ್ರ ಕಲಾವಿದ ಮಹಾನಿಂಗ ಹೋಸಕೊಟಿ ಹಾಗೂ ಸಹ ಚಿತ್ರ ಕಲಾವಿದರು ಕೈ ಚಳಕವು ದೇಶ ವಿದೇಶಗಳಲ್ಲಿ ಅಂತರ್ಜಾಲದ ಮೂಲಕ ಪ್ರದರ್ಶನ ಗೊಂಡಿದೆ.

ವೇದಿಕೆ ಮೇಲೆ ಪ್ರಿಯಾಂಕಾ ಸತೀಶ ಜಾರಕಿಹೊಳಿ, ರಾಹುಲ ಸತೀಶ ಜಾರಕಿಹೊಳಿ, ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗಲಾ, ಮಹಾನಿಂಗ ಹೋಸಕೊಟಿ ಇದ್ದರು.

Related posts: