ಗೋಕಾಕ:ಕುಡಿದ ಅಮಲಿನಲ್ಲಿ ಲಾರಿ ಚಾಲಿಸಿ ಸರಣಿ ಅಫಘಾತ : ಮಗು ಸೇರಿ ನಾಲ್ವರಿಗೆ ತೀವ್ರಗಾಯ ಗೋಕಾಕಿನಲ್ಲಿ ಘಟನೆ

ಕುಡಿದ ಅಮಲಿನಲ್ಲಿ ಲಾರಿ ಚಾಲಿಸಿ ಸರಣಿ ಅಫಘಾತ : ಮಗು ಸೇರಿ ನಾಲ್ವರಿಗೆ ತೀವ್ರಗಾಯ ಗೋಕಾಕಿನಲ್ಲಿ ಘಟನೆ
ಗೋಕಾಕ ಅ 1: ಕುಡಿದ ಅಮಲಿನಲ್ಲಿ ಲಾರಿ ಚಾಲನೆ ಮಾಡಿದ ಪರಿಣಾಮ ಕಾರು ಮತ್ತು ಬೈಕ್ ಗಳಿಗೆ ಡಿಕ್ಕಿ ಹೊಡೆದು ಲಾರಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿ ನಾಲ್ವರು ತೀವ್ರ ಗಾಯಗೊಂಡ ಘಟನೆ ಗೋಕಾಕ ನಗರದ ನಾಕಾ ನಂ 1ರಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸಂಕೇಶ್ವರ -ನರಗುಂದ ರಾಜ್ಯ ಹೆದ್ದಾರಿ ಮೇಲೆ ಸರಾಯಿ ಅಮಲಿನಲ್ಲಿ ಲಾರಿ ಚಲಾಯಿಸುತ್ತಿದ್ದ ಸರಣಿ ಅಪಘಾತ ನಡೆಸಿದ ಘಟನೆಯು ನಾಕಾ ನಂ 1 ರಲ್ಲಿದ್ದ ಜನರಲ್ಲಿ ಆತಂಕ ಹುಟ್ಟಿಸಿದೆ ಘಟನೆಯಲ್ಲಿ ಮಗು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಂಕೇಶ್ವರ ಪಟ್ಟಣದ ಮಹಾಂತೇಶ ಕಬ್ಬೂರ (33) , ಪ್ರಮೀಳಾ ಕಬ್ಬೂರ (25) , ಶಾಹೀಶ ಕಬ್ಬೂರ (3) ಘಟಪ್ರಭಾದ ಸಂಗಮೇಶ ಜಾಧವ ತೀವ್ರವಾಗಿ ಗಾಯಗೊಂಡಿದ್ದಾರೆ . ಗಾಯಾಳುಗಳನ್ನು ಚಿಕ್ಸತೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ .
ಲಾರಿ ಚಾಲಕ ರಾಜು ಭೋಸಲೆ ಅವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ
Related posts:
ಮೂಡಲಗಿ:ಶಾಸಕ ಬಾಲಚಂದ್ರರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು : ಗೋ…
ಗೋಕಾಕ:ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೋಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ…
ಗೋಕಾಕ:ಜನಪರ ಕಾಳಜಿ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಸತತವಾಗಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಶ್ಲಾಘನೀಯ : ಡಾ.ಪ…
