RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ

ಗೋಕಾಕ:ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ 

ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ!

ಗೋಕಾಕ ಜ 15 : ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ನಗರ, ಗೋಕಾಕ. ಕಳೆದ ಸುಮಾರು 17 ವರ್ಷಗಳಿಂದ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕøತಿಕ ನೆಲೆಗಟ್ಟುಗಳನ್ನು ಗಟ್ಟಿಗೊಳಿಸುವ ಪ್ರಯತ್ನದೊಂದಿಗೆ ಸಾಂಸ್ಕಂತಿಕ ನಗರ ಎಂಬ ಬಿರುದಾಂಕಿತಕ್ಕೆ ಭಾಜಿನವಾಗುತ್ತಿದೆ. ಈ ಸುದೀರ್ಘ ಪಯಣದಲ್ಲಿ ವಿವಿಧ ಕ್ಷೇತ್ರಗಳಿಂದ ಹಲವಾರು ಪ್ರತಿಭೆಗಳನ್ನು ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿರುವ ಸಾಂಸ್ಕಂತಿಕ ನಗರಿ ಗೋಕಾಕ ಇದೀಗ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಇದೇ ಗುರುವಾರದಿಂದ ನಾಲ್ಕು ದಿನಗಳ ಕಾಲ ಕರದಂಟಿನ ನಾಡಿನಲ್ಲಿ ಸಾಂಸ್ಕಂತಿಕ ಮೈಸೂರ ದರ್ಬಾರ ನಡೆಯಲಿದೆ. ಇದಕ್ಕಾಗಿ ದೂರದ ಮೈಸೂರು ಅರಮನೆಯನ್ನು ಹೋಲುವ ಭವ್ಯ ವೇದಿಕೆ ಸಜ್ಜಾಗುತ್ತಿದೆ.

ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮದ ವೇದಿಕೆ ನಿರ್ಮಿಸಿದ ಕಲಾವಿದರ ತಂಡ

ಹೌದು ದಿನಾಂಕ 18 ರಿಂದ ನಾಲ್ಕು ದಿನಗಳ ಕಾಲ ಸತೀಶ ಜಾರಕಿಹೊಳಿ ಪೌಂಡೇಶನ ಅಡಿಯಲ್ಲಿ ನಡೆಯುವ 17ನೇ ಸತೀಶ ಶುಗರ್ಸ್ ಅವಾಡ್ರ್ಸ್ ಸಾಂಸ್ಕಂತಿಕ ಹಬ್ಬಕ್ಕೆ ಮೈಸೂರು ಅರಮನೆ ಮಾದರಿಯ ಬಹು ದೊಡ್ಡ ವೇದಿಕೆ ನಿರ್ಮಾಣವಾಗುತ್ತಿದೆ. ಈ ಭವ್ಯ ಅಲಂಕೃತಿಕ ಐತಿಹಾಸಿಕ ವೇದಿಕೆಯಲ್ಲಿ ಪ್ರತಿ ದಿನ ಸಾಯಂಕಾಲ 5-00 ರಿಂದ 10-00 ರವರೆಗೆ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾನಪದ ನೃತ್ಯ, ಜಾನಪದ ಗಾಯನ, ಭಾವಗೀತೆ, ಗಾಯನ, ಸಮೂಹ ನೃತ್ಯ, ಸೋಲೋ ಡ್ಯಾನ್ಸ್, ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನೀತರ ಸಾಂಸ್ಕಂತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. 4 ದಿನಗಳ ಕಾಲ ನಡೆಯುವ ಸತೀಶ ಶುಗರ್ಸ್ ಅವಾಡ್ರ್ಸ್ ಸಾಂಸ್ಕಂತಿಕ ಹಬ್ಬದಲ್ಲಿ ಒಟ್ಟು 1554 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೈಸೂರು ಅರಮನೆ ಮಾದರಿಯ ಐತಿಹಾಸಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲಿದ್ದಾರೆ. ಸತೀಶ ಶುಗರ್ಸ್ ಅವಾಡ್ರ್ಸ್‍ನ ಮುಖ್ಯ ಸಂಘಟಕ ರಿಯಾಜ ಚೌಗಲಾ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಚಿತ್ರಕಲಾವಿದ ಮಹಾನಿಂಗ ಹೊಸಕೋಟಿ, ಫೆಬ್ರಿಕೇಶನ್ ಕಯೂಮ ಚೌಗಲಾ ಸೇರಿದಂತೆ 10 ಜನರ ನುರಿತ ತಂಡ ವೇಸ್ಟ್ ಬ್ಯಾನರ್ ಮತ್ತು ಕಬ್ಬಿನದ ತುಣುಕುಗಳನ್ನು ಬಳಸಿ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ.
ಕಳೆದ 17 ವರ್ಷಗಳಿಂದ ಹಲವು ಬಗೆಗಳ ವೇದಿಕೆ ನಿರ್ಮಿಸಿದ ಈ ತಂಡ ಈ ಸಾರಿ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮೈಸೂರು ಅರಮನೆಯನ್ನು ನಿರ್ಮಿಸಿ ಹೊಸ ಇತಿಹಾಸಕ್ಕೆ ಮುಂದಾಗಿರುವುದು ಗೋಕಾಕ ನಗರದ ಕಲಾಸಕ್ತರನ್ನು ಕೈ ಮಾಡಿ ಕರೆಯುತ್ತಿದೆ.

Related posts: