ಬೈಲಹೊಂಗಲ:ಆತ್ಮ ಶುದ್ಧಿಗಾಗಿ ಶರಣರ-ಸಂತರ ವಾಣಿಯನ್ನು ಆಲಿಸಿ- ಬಸವ ಸಿದ್ಧಲಿಂಗ ಸ್ವಾಮೀಜಿ
ಆತ್ಮ ಶುದ್ಧಿಗಾಗಿ ಶರಣರ-ಸಂತರ ವಾಣಿಯನ್ನು ಆಲಿಸಿ- ಬಸವ ಸಿದ್ಧಲಿಂಗ ಸ್ವಾಮೀಜಿ
ಸಂತ ಜ್ಞಾನೇಶ್ವರರ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ
ಬೈಲಹೊಂಗಲ ಜ 10 : ಸಾಧು ಸಂತರ ಹಾಗೂ ಶರಣರ ವಾಣಿಯನ್ನು ನಿರಂತರವಾಗಿ ಆಲಿಸುವುದರಿಂದ ಮನಸ್ಸು ಆತ್ಮ ಶುದ್ಧವಾಗುತ್ತದೆ ಇದರಿಂದ ಪ್ರತಿಯೊಬ್ಬರನ್ನು ತನ್ನಂತೆ ಎಂದು ಭಾವಿಸಿ ಸದಾ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರಿಪಿಸುತ್ತದೆ ಆದರಿಂದ ಪ್ರತಿಯೊಬ್ಬರು ಶರಣರ, ಪುಣ್ಯಪುರುಷ, ಮಹಾತ್ಮರ ಹಿತವಚನಗಳನ್ನು ಪ್ರತಿನಿತ್ಯ ಆಲಿಸಬೇಕೆಂದು ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಗ್ರಾಮದ ವಿಠ್ಠಲ-ರುಕ್ಮೀಣಿ ಮಂದಿರದ 110 ವರ್ಷದ ದೀಂಡಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಂತ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಶರಣರ ಸಂತರ ಮೂಲಕ ನಾವು ದೇವರನ್ನು ಕಾಣಬೇಕು, ಸಂತ ಜ್ಞಾನೇಶ್ವರರು ಮತ್ತು ತುಕಾರಾಮ ಮಹರಾಜರು ಸಾಕ್ಷಾತಾ ದೇವತಾ ಸ್ವರೂಪಿಗಳಾಗಿದ್ದರು ಅಂತವರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದರು. ಪ್ರತಿವರ್ಷದ ವಾಡಿಕೆಯಂತೆ ಗ್ರಾಮದ ಬಾಬಾಸಾಹೇಬ ಪಾಟೀಲರ ಮನೆಯಿಂದ ಮೆರವಣಿಗೆ ಆರಂಭವಾಯಿತು ನಂತರ ಗೋಪಾಲಣ್ಣಾ ಕುಲಕರ್ಣಿಯವರ ಮನೆಗೆ ಬಂದು ಅಲ್ಲಿರುವ ಪೋತಿಯನ್ನು ತೆಗೆದುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಮಂದಿರಕ್ಕೆ ತರಲಾಯಿತು. ನಂತರ ಬಸವ ಸಿದ್ಧಲಿಂಗ ಶ್ರೀಗಳಿಂದ ಜ್ಞಾನೇಶ್ವರಿ ಪಾರಾಯಣ ಗ್ರಂಥವನ್ನು ಗ್ರಾಮದ ಸಂತರಿಂದ, ಯುವಕರಿಂದ, ವಿದ್ಯಾರ್ಥಿಗಳಿಂದ ಓದಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರವಚನಕಾರರಾದ ವಿಕ್ರಮ ಒಡಗೋಲ, ಧರ್ಮಾ ಒಡಗೋಲ, ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ, ಸಂತ ಹವಾಲ್ದಾರ್ ಸಿದ್ಧಪ್ಪಾ ಕಾರಿಮನಿ, ಈರಪ್ಪಾ ಯಾಸನವರ, ಸಿದ್ದಪ್ಪಾ ಭಜೇರಿ, ರುದ್ರಪ್ಪ ಗಾಡದ, ರವಿ ಹೆಗಡೆ, ಪ್ರಭುದೇವ ಕಿಲ್ಲೇದ ಸಂತರು, ವಿದ್ಯಾರ್ಥಿಗಳು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
