RNI NO. KARKAN/2006/27779|Friday, April 19, 2024
You are here: Home » breaking news » ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ : ನಾಳೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ : ಡಾ.ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ : ನಾಳೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ : ಡಾ.ರಾಜೇಂದ್ರ ಸಣ್ಣಕ್ಕಿ 

ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ : ನಾಳೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ : ಡಾ.ರಾಜೇಂದ್ರ ಸಣ್ಣಕ್ಕಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 26 :

 

ಪೀರನವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲು ನಾಳೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ನಡೆಯುವ ಸಭೆಯಲ್ಲಿ ನಿರ್ಣಯವಾಗಿ ಆದಷ್ಟು ಬೇಗ ಮೂರ್ತಿ ಪ್ರತಿಷ್ಠಾಪನೆಯಾಗುವ ಆಶಾಭಾವನೆ ಇದೆ ಎಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಬುಧವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಂಗೋಳ್ಳಿ ರಾಯಣ್ಣನ ಮೂರ್ತಿ ವಿವಾದ ಕುರಿತು ಸೌರ್ಹಾಧ್ಯಯುತ್ತವಾಗಿ ಬಗೆ ಹರೆಸುವ ಭರವಸೆ ನೀಡಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ಹಾಲುಮತ ಸಮಾಜದ ಸಂಪೂರ್ಣ ವಿಶ್ವಾಸ ವಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿದು ಪೀರನವಾಡಿಯಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ಹಾಲುಮತ ಸಮಾಜ ಹಾಗೂ ರಾಯಣ್ಣನ ಸಾವಿರಾರು ಅಭಿಮಾನಿಗಳು ಹೊಂದಿದ್ದಾರೆ ಎಂದ ಅವರು ಹಾಲುಮತ ಸಮಾಜ ಭಾಂಧವರು ಹಾಗೂ ಸಂಗೋಳ್ಳಿ ರಾಯಣ್ಣನ ಸಾವಿರಾರು ಅಭಿಮಾನಿಗಳು ಮೂರ್ತಿ ಪ್ರತಿಷ್ಠಾಪನೆಯಾಗಲು ನಿರಂತರ ಹೋರಾಟಗಳನ್ನು ನಡೆಸಿ ತಮ್ಮ ಹಕ್ಕೋತ್ತಾಯ ಮಾಡುತ್ತಿದ್ದಾರೆ. ಗುರುವಾರ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯುವ ಹಾಲುಮತ ಸಮಾಜದ ಮುಖಂಡರ , ಪೀರನವಾಡಿ ಗ್ರಾಮಸ್ಥರ ಮತ್ತು ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಇದರ ಸಾಧಕ ಬಾಧಕಗಳು ಚರ್ಚೆಯಾಗಿ ಆದಷ್ಟು ಬೇಗ ಪೀರನವಾಡಿ ಗ್ರಾಮದ ಅದೆ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗುವ ವಿಶ್ವಾಸವಿದೆ ಆದ್ದರಿಂದ ಸಮಾಜ ಭಾಂಧವರು ಹಾಗೂ ರಾಯಣ್ಣನ ಅಭಿಮಾನಿಗಳು ತಮ್ಮ ಹೋರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಹಕರಿಸಬೇಕು ಎಂದು ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು

ರಾಯಣ್ಣನ ಇಡೀ ದೇಶದ ಆಸ್ತಿ : ವೀರ ಸಂಗೋಳ್ಳಿ ರಾಯಣ್ಣನ ಹಾಲುಮತ ಸಮಾಜಕ್ಕೆ ಮಾತ್ರ ಸಿಮಿತವಾಗದೆ ಇಡೀ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕನಾಗಿದ್ದು, ರಾಯಣ್ಣನ ಯಾವುದೇ ಜಾತಿ , ಮತಕ್ಕೆ ಸೀಮಿತವಾಗಲ್ಲ ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಡಾ.ಸಣ್ಣಕ್ಕಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡೆಪ್ಪ ತೋಳಿನವರ , ಮುಖಂಡರುಗಳಾದ ಲಕ್ಷ್ಮಣ ಚಂದರಗಿ , ಲಖನ ಚಂದರಗಿ ಉಪಸ್ಥಿತರಿದ್ದರು

Related posts: