ಮೂಡಲಗಿ:ಕಬಡ್ಡಿ ಈ ನೆಲದ ಮೂಲ ಕ್ರೀಡೆ : ಮಾಜಿ ಸಚಿವ ಬಾಲಚಂದ್ರ
ಕಬಡ್ಡಿ ಈ ನೆಲದ ಮೂಲ ಕ್ರೀಡೆ : ಮಾಜಿ ಸಚಿವ ಬಾಲಚಂದ್ರ
ಮೂಡಲಗಿ ಡಿ 10 : ಕಬಡ್ಡಿ ಈ ನೆಲದ ಮೂಲ ಕ್ರೀಡೆ. ನಮ್ಮ ಸಾಂಸ್ಕಂತಿಕ ಪರಂಪರೆಯ ಹಿನ್ನೆಲೆ ಇರುವ ಕಬಡ್ಡಿಯು ದೈಹಿಕ ಸಾಮಥ್ರ್ಯದ ಜೊತೆಗೆ ಕೌಶಲ್ಯಪೂರ್ಣ ಆಟವೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಹಳ್ಳೂರ ಗ್ರಾಮದಲ್ಲಿ ಶನಿವಾರ ರಾತ್ರಿ ಮಹಾಲಕ್ಷ್ಮೀ ಕಾರ್ತಿಕೋತ್ಸವ ನಿಮಿತ್ಯ ಪುಣ್ಯಕೋಟಿ ಸ್ಪೋಟ್ರ್ಸ್ ಕ್ಲಬ್, ಜೈ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಪುರುಷರ 60 ಕೆಜಿ ರಾಷ್ಟ್ರಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಬಡ್ಡಿಯು ಹೆಚ್ಚಾಗಿ ಯುವಕರು ಮತ್ತು ಬಾಲಕರು ಆಡುವ ಆಟವಾಗಿತ್ತು. ಆದರೆ ಈ ಆಟದ ಪ್ರಾಮುಖ್ಯವು ಹಾಗೂ ನಿಯಮಗಳು ಬದಲಾದಂತೆ ಮಹಿಳೆಯರು ಕೂಡ ಆಡುವಂತಾಗಿ, ಪುರುಷರಂತೆಯೇ ಮಹಿಳೆಯರು ಸಹ ಚಾಣಕ್ಯತೆಯಿಂದ ಆಡುವ ಆಟ ಕಬಡ್ಡಿ ಬೆಳೆದು ನಿಂತಿದೆ. ಈ ದೇಶಿಯ ಆಟವನ್ನು ಉಳಿಸಿ ಬೆಳೆಸುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಇಂದಿನ ದಿನಗಳಲ್ಲಿ ಯುವಕರು ಕ್ರೀಡೆಯ ವಿಷಯ ಬಂದಾಗ ಕ್ರಿಕೇಟ, ವ್ಹಾಲಿಬಾಲ್, ಹಾಕಿ ಹಾಗೂ ಇನ್ನೀತರ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಸ್ವಲ್ಪ ಮಟ್ಟಿಗೆ ಇಂದು ಕಾಲ ಬದಲಾಗಿ ಹೋಗಿದೆ. ಹೆಚ್ಚಾಗಿ ದೇಶಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಿ ಗ್ರಾಮೀಣ ಪ್ರದೇಶದಲ್ಲಿ ಅವುಗಳನ್ನು ಪೋಷಿಸುವಂತೆ ಕೋರಿದರು.
ಜಿಪಂ ಸದಸ್ಯೆ ವಾಸಂತಿ ಹಣಮಂತ ತೇರದಾಳ, ತಾಪಂ ಸದಸ್ಯೆ ಸವಿತಾ ಸುರೇಶ ಡಬ್ಬನವರ, ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ, ಬಿ.ಎಸ್.ಸಂತಿ, ಬಿ.ಜಿ. ಸಂತಿ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಕುಮಾರ ಲೋಕನ್ನವರ, ಸುರೇಶ ಕತ್ತಿ, ಶಿವದುಂಡು ಕೊಂಗಾಲಿ, ಲಕ್ಷ್ಮಣ ಕತ್ತಿ, ಅಡಿವೆಪ್ಪ ಪಾಲಭಾವಿ, ಬಿ.ಬಿ. ಸಪ್ತಸಾಗರ, ಕಾರ್ಯಕ್ರಮ ಸಂಘಟಕರಾದ ಬಸು ಹೊಸಮನಿ, ಸಿದ್ದು ದುರದುಂಡಿ, ಭಗವಂತ ಛಬ್ಬಿ, ಸಿದ್ದಪ್ಪ ಅರಬಳ್ಳಿ, ಗ್ರಾಮ ಪಂಚಾಯತ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಮಹಿಳೆಯರ 60 ಕೆಜಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬಿರಡಿಯ ಅಬಾಜಿ ಫೌಂಡೇಷನ್ ತಂಡವು ಬೆಳಗಾವಿಯ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನ ಗಳಿಸಿತು. ಬೆಳಗಾವಿ, ಐನಾಪೂರ ಹಾಗೂ ಚಿಮ್ಮಡ ತಂಡಗಳು ಕ್ರಮವಾಗಿ ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನಗಳನ್ನು ಪಡೆದುಕೊಂಡವು.