RNI NO. KARKAN/2006/27779|Tuesday, December 2, 2025
You are here: Home » breaking news » ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಇಂಟೆಕ್ ಸಂಘಟನೆ ಯವರಿಂದ ಗೋಕಾಕದಿಂದ ಬೆಳಗಾವಿವರೆಗೆ ಪಾದಯಾತ್ರೆ

ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಇಂಟೆಕ್ ಸಂಘಟನೆ ಯವರಿಂದ ಗೋಕಾಕದಿಂದ ಬೆಳಗಾವಿವರೆಗೆ ಪಾದಯಾತ್ರೆ 

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಇಂಟೆಕ್ ಸಂಘಟನೆ ಯವರಿಂದ ಗೋಕಾಕದಿಂದ ಬೆಳಗಾವಿವರೆಗೆ ಪಾದಯಾತ್ರೆ

ಗೋಕಾಕ ನ 26 : ಗೋಕಾಕ ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆ ಇಂಟೆಕ್ ರಾಷ್ಟ್ರೀಯ ಮಜದೂರ ಯೂನಿಯನ್ ಸಂಘಟನೆಯವರು ಬುಧವಾರದಂದು ನಗರದ ಬಸವೇಶ್ವರ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆಯನ್ನು ಕೈಗೊಂಡರು.

ಪಾದಯಾತ್ರೆಗೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಚಾಲನೆ ನೀಡಿದರು.
ಪಾದಯಾತ್ರೆ ಕೈಗೊಂಡಿರುವ ಇಂಟೆಕ ಸಂಘಟನೆ ಪದಾಧಿಕಾರಿಗಳು ಗುರುವಾರದಂದು ಬೆಳಿಗ್ಗೆ 10 ಘಂಟೆಗೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ಗೋಕಾಕ ನೂತನ ಜಿಲ್ಲೆಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಲಿದ್ದಾರೆ.

ಪಾದಯಾತ್ರೆಯಲ್ಲಿ ಇಂಟೆಕ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ ಮುಜಾವರ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮೈನು ಅಂಡಗಿ, ಮಹಿಳಾ ಅಧ್ಯಕ್ಷೆ ಸಂಗೀತಾ ಕಾಂಬ್ಳೆ , ಶಾರದಾ ಹೊನ್ನಕುಪ್ಪಿ, ಅನ್ನಪೂರ್ಣ ಮುನ್ನೋಳಿ, ಮೈಬೂಬ ಮತ್ತೆ, ಮುಸ್ತಾಕ ಅಂಡಗಿ, ಮದಾರ ಪಟೇಲ್, ಸುಬಾನಿ ಮಂಕಾದಾರ, ಮಂಜುಳಾ ನಿಜಲಿಂಗಪ್ಪಗೋಳ, ನ್ಯಾಮತ ಶೇಖ್ ಇಮ್ತಿಯಾಜ ಮೋಮಿನ, ನಸರುಲ್ಲಾ ಚವ್ಹಾಣ, ದಾದಾಪೀರ ಅಥಣಿ, ಮಾರುತಿ ಜೋಗಿರಾಮ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

Related posts:

ಗೋಕಾಕ:ಕಸಾಪ ಚುನಾವಣೆ : ಎಲ್ಲ ಕನ್ನಡಿಗರು ನನ್ನನ್ನು ಬೆಂಬಲಿಸಿ ಕನ್ನಡ ತಾಯಿಯ ಸೇವೆ ಮಾಡುವ ಅವಕಾಶ ಕಲ್ಪಿಸಿ : ಖಾನಪ್ಪನ…

ಗೋಕಾಕ:ನಕಲು ರಹಿತ ಪರೀಕ್ಷೆ ನಡೆಸಲು ಅಧಿಕಾರಿಗಳು ಮತ್ತು ಕೊಠಡಿ ಮೇಲ್ವಿಚಾರಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿ : …

ಗೋಕಾಕ:ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶ…