RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಎಸ್.ಎಸ್‌. ಎಲ್.ಸಿ ಫಲಿತಾಂಶ : ಗೋಕಾಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ : ಶಾಸಕ ರಮೇಶ ಹರ್ಷ

ಗೋಕಾಕ:ಎಸ್.ಎಸ್‌. ಎಲ್.ಸಿ ಫಲಿತಾಂಶ : ಗೋಕಾಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ : ಶಾಸಕ ರಮೇಶ ಹರ್ಷ 

ಎಸ್.ಎಸ್‌. ಎಲ್.ಸಿ ಫಲಿತಾಂಶ : ಗೋಕಾಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ : ಶಾಸಕ ರಮೇಶ ಹರ್ಷ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 19:

 
ಕಳೆದ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗೋಕಾಕ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿರುವುದಕ್ಕೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗೋಕಾಕ ಶೈಕ್ಷಣಿಕ ವಲಯ ಈ ಬಾರಿಯೂ ದ್ವಿತೀಯ ಸ್ಥಾನ ಗಳಿಸಿದ್ದು, ಶೇ ಶೇಕಡಾ 94.58 ರಷ್ಟು ಫಲಿತಾಂಶ ಬಂದಿದೆ. ಗೋಕಾಕ ವಲಯ ದ್ವಿತೀಯ ಸ್ಥಾನ ಗಿಟ್ಟಿಸಲು ಕಾರಣೀಕರ್ತರಾದ ಎಲ್ಲ ವಿದ್ಯಾರ್ಥಿ ಬಳಗಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, ಉತ್ತಮ ಫಲಿತಾಂಶಕ್ಕೆ ಶ್ರಮಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಗಜಬರಸಾಬ ಬಳಗಾರ ಮತ್ತು ಶಿಕ್ಷಕ ಬಳಗ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಸದಾ ಪ್ರೋತ್ಸಾಹಿಸುತ್ತಿರುವ ಪಾಲಕ-ಪೋಷಕರಿಗೆ ಶಾಸಕ ಜಾರಕಿಹೊಳಿ , ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related posts: